Thursday, 30 January 2025

ಬೆಂಗಳೂರು – ಮಂಗಳೂರು ಬಸ್ಸು ತಡೆದು ಮಾರಕಾಸ್ತ್ರದಿಂದ ಹಲ್ಲೆ- ಪುಡಿ ರೌಡಿಯ ಕಾಲಿಗೆ ಗುಂಡೇಟು, ಅರೆಸ್ಟ್‌

 ಹಾಸನ: ಬೆಂಗಳೂರಿನಿಂದ ಮಂಗಳೂರಿಗೆ  ತೆರಳುತ್ತಿದ್ದ ಖಾಸಗಿ ಬಸ್ ತಡೆದು ಲಾಂಗ್‌ನಿಂದ ಹಲ್ಲೆ ಮಾಡಿ ಅಟ್ಟಹಾಸ ಮೆರೆದಿದ್ದ ಪುಡಿರೌಡಿಯ ಕಾಲಿಗೆ ಪೊಲೀಸರು ಗುಂಡು ಹಾರಿಸಿದ ಘಟನೆ ಶಾಂತಿಗ್ರಾಮ ಬಳಿ ನಡೆದಿದೆ.




ಒಂದು ಕೊಲೆ,  ಮೂರು ಕೊಲೆ ಯತ್ನ ಪ್ರಕರಣಗಳ ಆರೋಪಿಯಾಗಿರುವ ಮನುವನ್ನು (23) ಬೆಂಗಳೂರಿನಲ್ಲಿ ಬಂಧಿಸಿ ನಗರ ಠಾಣೆ ಪೊಲೀಸರು ಹಾಸನಕ್ಕೆ ಕರೆ ತರುತ್ತಿದ್ದರು. ಈ ವೇಳೆ ಮೂತ್ರ ವಿಸರ್ಜನೆಗೆ ಅನುಮತಿ ನೀಡಬೇಕೆಂದು ಕೇಳಿದ್ದಾನೆ.

ಒಂದು ಕೊಲೆ,  ಮೂರು ಕೊಲೆ ಯತ್ನ ಪ್ರಕರಣಗಳ ಆರೋಪಿಯಾಗಿರುವ ಮನುವನ್ನು (23) ಬೆಂಗಳೂರಿನಲ್ಲಿ ಬಂಧಿಸಿ ನಗರ ಠಾಣೆ ಪೊಲೀಸರು ಹಾಸನಕ್ಕೆ ಕರೆ ತರುತ್ತಿದ್ದರು. ಈ ವೇಳೆ ಮೂತ್ರ ವಿಸರ್ಜನೆಗೆ ಅನುಮತಿ ನೀಡಬೇಕೆಂದು ಕೇಳಿದ್ದಾನೆ.

ಶಾಂತಿಗ್ರಾಮ ಬಳಿ ರಸ್ತೆ ಬದಿ ಜೀಪ್ ನಿಲ್ಲಿಸಿ ಮೂತ್ರ ವಿಸರ್ಜನೆಗೆ ಅವಕಾಶ ನೀಡಿದಾಗ ಪೊಲೀಸರ ಮೇಲೆಯೇ ಕಲ್ಲಿನಿಂದ ಹಲ್ಲೆ ನಡೆಸಿ ಪರಾರಿಯಾಗಲು ಮನು ಯತ್ನಿಸಿದ್ದಾನೆ.ಈ ಸಂದರ್ಭದಲ್ಲಿ ಹಾಸನ ನಗರಠಾಣೆ ಇನ್ಸ್‌ಪೆಕ್ಟರ್ ಮೋಹನ್‌ಕೃಷ್ಣ ಆತ್ಮರಕ್ಷಣೆಗಾಗಿ ಆರೋಪಿ ಕಾಲಿಗೆ ಗುಂಡು ಹಾರಿಸಿದ್ದಾರೆ. ನಂತರ ಸಬ್‌ಇನ್ಸ್‌ಪೆಕ್ಟರ್ ಕುಮಾರ್ ಆರೋಪಿಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ‌.

ಬುಧವಾರ ನಸುಕಿನ ಜಾವ 2 ಗಂಟೆಗೆ ಬೈಪಾಸ್‌ ರಸ್ತೆಯ ದೇವರಾಯಪಟ್ಟಣದ ಬಳಿ ಬೆಂಗಳೂರಿನಿಂದ ಮಂಗಳೂರಿಗೆ ಖಾಸಗಿ ಬಸ್‌ ಸಂಚರಿಸುತ್ತಿತ್ತು. ಈ ಸಂದರ್ಭದಲ್ಲಿ ಕೆಎ 51 ಎಂವಿ 8912 ನಂಬರ್‌ನ ಸ್ವಿಫ್ಟ್ ಕಾರನ್ನು ಬಸ್ಸಿನ ಮುಂದೆ ಮನು ಅಡ್ಡ ಹಾಕಿ ನಿಲ್ಲಿಸಿದ್ದ. ಕಾರಿನಿಂದ ಇಳಿದ ಬಳಿಕ ಗಲಾಟೆ ಮಾಡಿ ಬಸ್ಸಿನ ಗ್ಲಾಸನ್ನು ಒಡೆದು ಹಾಕಿದ್ದ. ಪುಡಿ ರೌಡಿ ಮನುವಿನ ಹುಚ್ಚಾಟ ಬಸ್ಸಿನಲ್ಲಿದ್ದವರ ಮೊಬೈಲಿನಲ್ಲಿ ಸೆರೆಯಾಗಿತ್ತು. ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗುತ್ತಿದ್ದಂತೆ ಆರೋಪಿಯ ಬಂಧನಕ್ಕೆ ಪೊಲೀಸರು ಬಲೆಗೆ.

ಬಸ್ಸಿಗೆ ಹೀಗೆ ಆದರೆ ಇನ್ನೂ ಕಾರು, ಬೈಕಿನಂತ ವಾಹನದಲ್ಲಿ ‌ಪ್ರಯಾಣ ಮಾಡುವವರು ಏನು ಮಾಡಬೇಕು ಎಂದು ನೆಟ್ಟಿಗರು ಪೊಲೀಸರನ್ನು ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡಿದ್ದರು.

Saturday, 5 October 2024

ಮೊಯ್ದೀನ್‌ ಬಾವಾ ಸೋದರ ಮಮ್ತಾಜ್‌ ಅಲಿ ನಾಪತ್ತೆ; ಅಪಘಾತ ಸ್ಥಿತಿಯಲ್ಲಿ ಕಾರು ಪತ್ತೆ

 ದಕ್ಷಿಣಕನ್ನಡ: ಮಾಜಿ ಶಾಸಕ ಮೊಯಿದೀನ್ ಬಾವಾ ಅವರ ಸಹೋದರ ಮಮ್ತಾಜ್ ಅಲಿ ಅವರ ಕಾರು ಅಪಘಾತಗೊಂಡ ಸ್ಥಿತಿಯಲ್ಲಿ ಅ.6ರ ರವಿವಾರ ಕೂಳೂರು ಸೇತುವೆ ಮೇಲೆ ಪತ್ತೆಯಾಗಿದ್ದು, ಅವರು ನಾಪತ್ತೆಯಾಗಿದ್ದಾರೆ.



ರವಿವಾರ ಮುಂಜಾನೆ ಘಟನೆ ಬೆಳಕಿಗೆ ಬಂದಿದ್ದು, ಅಗ್ನಿಶಾಮಕ ಹಾಗೂ ಈಜು ತಜ್ಞರು ನದಿಯಲ್ಲಿ ಹುಡುಕಾಟ ಆರಂಭಿಸಿದ್ದರೆ, ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳದಲ್ಲಿ ಚುರುಕಿನ ತನಿಖೆ ಕೈಗೊಂಡಿದ್ದಾರೆ.



ಮಮ್ತಾಜ್ ಅಲಿ ಅವರು ತನ್ನ ಮಗಳಿಗೆ ವಾಟ್ಸಪ್ ಮೂಲಕ ಇನ್ನು ನಾನು ಹಿಂತಿರುಗಿ ಬರುವುದಿಲ್ಲ ಎಂಬ ಸಂದೇಶ ಕೂಡ ರವಾನಿಸಿದ್ದಾರೆ ಎನ್ನಲಾಗಿದ್ದು, ಆತಂಕಕ್ಕೆ ಕಾರಣವಾಗಿದೆ.



Monday, 30 September 2024

ಕಾರ್ಕಳ-ಧರ್ಮಸ್ಥಳ ಹೆದ್ದಾರಿಯಲ್ಲಿ ಭೀಕರ ಅಪಘಾತ: ತಂದೆ ಜತೆಗೆ ಮೂವರು ಮಕ್ಕಳು ಸಾವು. ಉಡುಪಿ, (ಸೆಪ್ಟೆಂಬರ್ 30): ಕಾರ್ಕಳ-ಧರ್ಮಸ್ಥಳ ಹೆದ್ದಾರಿಯಲ್ಲಿ ಇಂದು (ಸೆಪ್ಟೆಂಬರ್ 30) ಭೀಕರ ಅಪಘಾತ ಸಂಭವಿಸಿದ್ದು, ಘಟನೆಯಲ್ಲಿ ನಾಲ್ವರು ಮೃತಪಟ್ಟಿದ್ದಾರೆ. ಉಡುಪಿ ಜಿಲ್ಲೆ ಕಾರ್ಕಳ ತಾಲೂಕಿನ ಹೊಸ್ಮಾರುನ ಪಾಜೆಗುಡ್ಡೆ ಬಳಿ ಬೈಕ್​ಗೆ ಲಾರಿ ಡಿಕ್ಕಿಯಾಗಿದೆ. ಪರಿಣಾಮ ಬೈಕ್​ನಲ್ಲಿ ತೆರಳುತ್ತಿದ್ದ ತಂದೆ ಹಾಗೂ ಮೂವರು ಮಕ್ಕಳು ಸಾವನ್ನಪ್ಪಿದ್ದಾರೆ. ಸುರೇಶ್ ಆಚಾರ್ಯ(36), ಸಮೀಕ್ಷಾ(7), ಸುಶ್ಮಿತಾ(5) ಸುಶಾಂತ್(2) ಮೃತರು. ಇನ್ನು ಸುರೇಶ್ ಆಚಾರ್ಯ ಪತ್ನಿ ಮೀನಾಕ್ಷಿ ಆಚಾರ್ಯ(32) ಸ್ಥಿತಿ ಗಂಭೀರವಾಗಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

 


ಉಡುಪಿ, (ಸೆಪ್ಟೆಂಬರ್ 30): ಕಾರ್ಕಳ-ಧರ್ಮಸ್ಥಳ ಹೆದ್ದಾರಿಯಲ್ಲಿ ಇಂದು (ಸೆಪ್ಟೆಂಬರ್ 30) ಭೀಕರ ಅಪಘಾತ ಸಂಭವಿಸಿದ್ದು, ಘಟನೆಯಲ್ಲಿ ನಾಲ್ವರು ಮೃತಪಟ್ಟಿದ್ದಾರೆ. ಉಡುಪಿ ಜಿಲ್ಲೆ ಕಾರ್ಕಳ ತಾಲೂಕಿನ ಹೊಸ್ಮಾರುನ ಪಾಜೆಗುಡ್ಡೆ ಬಳಿ ಬೈಕ್​ಗೆ ಲಾರಿ ಡಿಕ್ಕಿಯಾಗಿದೆ. ಪರಿಣಾಮ ಬೈಕ್​ನಲ್ಲಿ ತೆರಳುತ್ತಿದ್ದ ತಂದೆ ಹಾಗೂ ಮೂವರು ಮಕ್ಕಳು ಸಾವನ್ನಪ್ಪಿದ್ದಾರೆ. ಸುರೇಶ್ ಆಚಾರ್ಯ(36), ಸಮೀಕ್ಷಾ(7), ಸುಶ್ಮಿತಾ(5) ಸುಶಾಂತ್(2) ಮೃತರು. ಇನ್ನು ಸುರೇಶ್ ಆಚಾರ್ಯ ಪತ್ನಿ ಮೀನಾಕ್ಷಿ ಆಚಾರ್ಯ(32) ಸ್ಥಿತಿ ಗಂಭೀರವಾಗಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

Sunday, 29 September 2024

ಬಿಗ್ ಬಾಸ್ ಮನೆಗೆ ಕರಾವಳಿಯ ಹಿಂದೂ ಫೈರ್ ಬ್ರ್ಯಾಂಡ್ ಚೈತ್ರಾ ಕುಂದಾಪುರ.

ಬೆಂಗಳೂರು ಸೆಪ್ಟೆಂಬರ್ 29: ಕರಾವಳಿಯ ಹಿಂದೂ ಫೈರ್ ಬ್ರ್ಯಾಂಡ್ ಖ್ಯಾತಿಯ ಪ್ರಖರ ಭಾಷಣಗಾರ್ತಿ ಚೈತ್ರಾ ಕುಂದಾಪುರ ಈ ಬಾರಿ ಬಿಗ್ ಬಾಸ್ ಸೀಸನ್ 11 ರ ಮೂರನೆ ಸ್ಪರ್ಧಿಯಾಗಿ ಬಿಗ್ ಬಾಸ್ ಮನೆಗೆ ತೆರಳಿದ್ದಾರೆ.




ಚೈತ್ರಾ ಕುಂದಾಪುರ ಅವರು ಉಡುಪಿ ಜಿಲ್ಲೆ ಕುಂದಾಪುರದವರು.. ಪ್ರಖರ ಭಾಷಣಕಾರರಾಗಿ ಗಮನ ಸೆಳೆದವರು.ಕುಂದಾಪುರದಲ್ಲಿ ಪಿಯುಸಿವರೆಗೆ ವ್ಯಾಸಂಗ ಮಾಡಿದ ಚೈತ್ರಾ, ಕೊಣಾಜೆಯಲ್ಲಿ ಪದವಿ ಪೂರ್ಣಗೊಳಿಸಿದರು. ಮಂಗಳೂರು ವಿಶ್ವ ವಿದ್ಯಾಲಯದ ಪದವೀಧರೆಯಾದ ಚೈತ್ರಾ ಕುಂದಾಪುರ, ಕೆಲ ಕಾಲ ಬೆಂಗಳೂರಿನಲ್ಲಿ ಖಾಸಗಿ ವಾಹಿನಿಯಲ್ಲಿ ಕೆಲಸ ಮಾಡಿದ್ದರು.​ ಉಡುಪಿಯ ಸ್ಪಂದನ ಟಿವಿಯ ನಿರೂಪಕಿಯಾಗಿದ್ದರು ಕಾಲೇಜು ದಿನಗಳಿಂದಲೇ ಎಬಿವಿಪಿ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದರು. ಪತ್ರಕರ್ತೆಯಾಗಿ, ನಿರೂಪಕಿಯಾಗಿ ಭಾಷಣಕಾರರಾಗಿ ಗಮನ ಸೆಳೆದಿರೋ ಇವರು ಪ್ರೇಮ ಪಾಶ ಅನ್ನೋ ಚೊಚ್ಚಲ ಕೃತಿ ಬರೆದಿದ್ದಾರೆ.




ಉಡುಪಿ ಜಿಲ್ಲೆ ಬೈಂದೂರಿನ ಉದ್ಯಮಿ ಹಾಗೂ ಸಮಾಜ ಸೇವಕ ಗೋವಿಂದ ಬಾಬು ಪೂಜಾರಿ ಅವರಿಗೆ ಚೈತ್ರಾ ಕುಂದಾಪುರ ಮೋಸ ಮಾಡಿದ್ದಾರಂತೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಕೊಡಿಸ್ತೇನೆ ಅಂತಾ ಚೈತ್ರಾ ಕುಂದಾಪುರ ನಂಬಿಸಿದ್ದರಂತೆ. ಟಿಕೆಟ್ ಆಮಿಷ ಒಡ್ಡಿ 7 ಕೋಟಿ ರೂಪಾಯಿ ಹಣವನ್ನು ವಸೂಲಿ ಮಾಡಿದ್ರಂತೆ. ಇದು ಚೈತ್ರಾ ಕುಂದಾಪುರ ಹಾಗೂ ಅವರ ಸಂಗಡಿಗರ ವಿರುದ್ಧ ಕೇಳಿ ಬಂದಿರೋ ಆರೋಪ. ಈ ಆರೋಪದ ಮೇಲೆ ಬೆಂಗಳೂರಿನ ಸಿಸಿಬಿ ಪೊಲೀಸರು ಚೈತ್ರಾ ಕುಂದಾಪುರ ಅವರನ್ನು ಅರೆಸ್ಟ್ ಮಾಡಿದ್ದರು, ಕೆಲವು ದಿನಗಳ ಕಾಲ ಜೈಲಿನಲ್ಲಿದ್ದ ಚೈತ್ರಾ ಬಳಿಕ ಜಾಮೀನಿನ ಮೇಲೆ ಬಂದಿದ್ದಾರೆ. ಇದೀಗ ಬಿಗ್ ಬಾಸ್ ಮನೆಗೆ ಚೈತ್ರಾ ಕುಂದಾಪುರ ಕಾಲಿಟ್ಟಿದ್ದಾರೆ. ಹಿಂದುತ್ವದ ಪ್ರಖರ ಭಾಷಣಗಾರ್ತಿಯಾಗಿರುವ ಚೈತ್ರಾ ಕುಂದಾಪುರ ಬಿಗ್ ಬಾಸ್ ಮನೆಯಲ್ಲಿ ಹೇಗಿರುತ್ತಾರೆ ಅನ್ನೊಂದು ನೋಡಬೇಕಿದೆ.

ಉಡುಪಿ: ಖ್ಯಾತ ಛಾಯಾಗ್ರಾಹಕ ಗುರುದತ್ ಕಾಮತ್ ನಿಧನ

ಉಡುಪಿ: ಖ್ಯಾತ ಹಿರಿಯ ಛಾಯಾಗ್ರಾಹಕ ಗುರುದತ್ ಕಾಮತ್ (58) ಅವರು ಅಲ್ಪಕಾಲದ ಅಸೌಖ್ಯದಿಂದ ಇಂದು ನಿಧನ ಹೊಂದಿದರು.


ಗುರುದತ್ ಕಾಮತ್ 


ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಇಂದು ಕೊನೆಯುಸಿರೆಳೆದಿದ್ದಾರೆ.

ಬಹುಮುಖ ಪ್ರತಿಭೆಯ ಛಾಯಾಚಿತ್ರ ಕಲಾವಿದರಾದ ಕಾಮತ್ ರವರ ಗರಡಿಯಲ್ಲಿ ಹಲವಾರು ಛಾಯಾಚಿತ್ರ ಕಲಾವಿದರು ನೆಲೆಕಂಡಿಕೊಂಡಿದ್ದಾರೆ. ಛಾಯಾಗ್ರಹಣ ಕಾರ್ಯಾಗಾರವನ್ನು ಛಾಯಾ ಗ್ರಾಹಕರಿಗೋಸ್ಕರ ನಿರಂತರ ನಡೆಸುತಿದ್ದರು. 


ತಮ್ಮ ಕೈಚಳಕದ ಛಾಯಾಚಿತ್ರಗಳಿಗೆ ದೇಶ ವಿದೇಶಗಳಿಂದ ಹಲವು ಪ್ರಶಸ್ತಿಗಳನ್ನು ಪಡೆದಿದ್ದರು. ಶಿರೂರು ಶ್ರೀಗಳ ಪರ್ಯಾಯದ ಸಮಯದಲ್ಲಿ ದಿನ ನಿತ್ಯವೂ ಶ್ರೀ ಕೃಷ್ಣ ಪರಮಾತ್ಮನ ಅಲಂಕಾರದ ಛಾಯಾಚಿತ್ರ ಗಳನ್ನು ಹಾಗೂ ಶ್ರೀ ಕೃಷ್ಣ ಮಠದ ಎಲ್ಲಾ ಉತ್ಸವದ,  ಹಬ್ಬ ಹರಿ ದಿನಗಳ ಛಾಯಾ ಚಿತ್ರ ಗಳನ್ನು ಭಗದ್ಭಕ್ತರಿಗೆ ತಲುಪಿಸುತ್ತಿದ್ದ ಶ್ರೀ ಕೃಷ್ಣ ಮಠದೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದರು.

Monday, 23 September 2024

ಪುತ್ತೂರು – ನವಜಾತ ಶಿಶು ಕೊಂಡೊಯ್ಯುತ್ತಿದ್ದ ಅಂಬ್ಯುಲೆನ್ಸ್ ಅಪಘಾತ

 ಪುತ್ತೂರು ಸೆಪ್ಟೆಂಬರ್ 24: ಅಂಬ್ಯುಲೆನ್ಸ್ ಗೆ ಪಿಕಪ್ ವೊಂದು ಡಿಕ್ಕಿ ಹೊಡೆದ ಘಟನೆ ಘಟನೆ ಪುತ್ತೂರು ತಾಲೂಕಿನ ಮುರ ಎಂಬಲ್ಲಿ ಸೋಮವಾರ ತಡರಾತ್ರಿ ನಡೆದಿರುವ ಬಗ್ಗೆ ವರದಿಯಾಗಿದೆ.




ಸುಳ್ಯದ ಆಸ್ಪತ್ರೆಯಲ್ಲಿ ಜನಿಸಿದ ನವಜಾತ ಶಿಶುವಿಗೆ ಚಿಕಿತ್ಸೆಗೆ ಮಂಗಳೂರು ಆಸ್ಪತ್ರೆಗೆ ಅಂಬ್ಯುಲೆನ್ಸ್ ನಲ್ಲಿ ಕರೆದುಕೊಂಡು ಹೋಗುವ ವೇಳೆ ಈ ಅಪಘಾತ ಸಂಭವಿಸಿದೆ. ಎದುರು ದಿಕ್ಕಿನಿಂದ ಬಂದ ಪಿಕಪ್ ಆಂಬ್ಯುಲೆನ್ಸ್ ಗೆ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ. ಇದರಿಂದಾಗಿ ಆಂಬ್ಯುಲೆನ್ಸ್ ನಲ್ಲಿದ್ದ ಮಗು ಹಾಗೂ ಚಾಲಕನಿಗೆ ಸಣ್ಣ- ಪುಟ್ಟ ಗಾಯಗಳಾಗಿವೆ. ಕೂಡಲೇ ಬೇರೆ ವಾಹನದಲ್ಲಿ ಮಗುವನ್ನು ಮತ್ತು ಮನೆಯವರನ್ನು ಮಂಗಳೂರಿಗೆ ಕಳುಹಿಸಲಾಗಿದೆ ಎಂದು ತಿಳಿದು ಬಂದಿದೆ.

Sunday, 22 September 2024

ಬೆಂಗಳೂರು ಮಹಾಲಕ್ಷ್ಮಿ ಕೊಲೆ ಕೇಸ್​ಗೆ ಮತ್ತಷ್ಟು ಟ್ವಿಸ್ಟ್: ಪದೇ ಪದೇ ಗಂಡನಿಗೆ ಕಿರುಕುಳಸ್ನೇಹಿತ ಅಶ್ರಫ್​ ಸೇರಿದಂತೆ ನಾಲ್ವರ ಮೇಲೆ ಕುಟುಂಬಸ್ಥರ ಅನುಮಾನ,

ಬೆಂಗಳೂರಿನ ವೈಯಾಲಿಕಾವಲ್‌ನಲ್ಲಿ ಕೊಲೆಯಾದ ಮಹಾಲಕ್ಷ್ಮೀ ಕಿರುಕುಳಕ್ಕೆ ಪತಿ ಹೇಮಂತ್‌ ಬೇಸತ್ತಿದ್ದ. ಪದೇಪದೆ ಗಂಡನಿಗೆ ಕಿರುಕುಳ ನೀಡಿ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದಳು. ಮಹಾಲಕ್ಷ್ಮೀ ಆಗಾಗ ಹಣ ಬೇಕೆಂದು ಗಂಡನನ್ನು ಪೀಡಿಸುತ್ತಿದ್ದಳು. ಹಣ ಕೊಡದಿದ್ದರೆ ಮೊಬೈಲ್ ಶಾಪ್ ಬಳಿಯೇ ಹಲ್ಲೆ ಮಾಡುತ್ತಿದ್ದಳು ಎನ್ನಲಾಗಿದೆ. ಆ ಮೂಲಕ ಮಹಾಲಕ್ಷ್ಮಿ ಕೊಲೆ ಪ್ರಕರಣಕ್ಕೆ‌ ಮತ್ತಷ್ಟು ಟ್ವಿಸ್ಟ್ ಸಿಕ್ಕಿದೆ.


ನೆಲಮಂಗಲ, ಸೆಪ್ಟೆಂಬರ್​ 22: 

ಬೆಂಗಳೂರಿನ ವೈಯಾಲಿಕಾವಲ್‌ನಲ್ಲಿ ಮಹಾಲಕ್ಷ್ಮೀ ಕೊಲೆ ಪ್ರಕರಣಕ್ಕೆ. ಸಂಬಂಧಿಸಿದಂತೆ ಇದೀಗ ಹಲವು ಅನುಮಾನಗಳು ಹುಟ್ಟಿಕೊಂಡಿವೆ. ಪರಸಂಗದ ಪೀಕಲಾಟಕ್ಕೆ ಮಹಿಳೆ ಕೊಲೆಯಾದಳಾ ಎನ್ನುವ ಅನುಮಾನ ವ್ಯಕ್ತವಾಗಿದೆ. ಸದ್ಯ ಈ ಪ್ರಕರಣ ಪೊಲೀಸರಿಗೆ ಚಾಲೆಂಜಿಂಗ್​ ಆಗಿದೆ. ಇದರ ಮಧ್ಯೆ ಮಹಾಲಕ್ಷ್ಮಿ ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ.



ಪದೇಪದೆ ಗಂಡನಿಗೆ ಕಿರುಕುಳ

ಬೆಂಗಳೂರಿನ ವೈಯಾಲಿಕಾವಲ್‌ನಲ್ಲಿ ಕೊಲೆಯಾದ ಮಹಾಲಕ್ಷ್ಮೀ ಕಿರುಕುಳಕ್ಕೆ ಪತಿ ಹೇಮಂತ್‌ ಬೇಸತ್ತಿದ್ದ. ಪದೇಪದೆ ಗಂಡನಿಗೆ ಕಿರುಕುಳ ನೀಡಿ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದಳು. ಮಹಾಲಕ್ಷ್ಮೀ ಆಗಾಗ ಹಣ ಬೇಕೆಂದು ಗಂಡನನ್ನು ಪೀಡಿಸುತ್ತಿದ್ದಳು. ಹಣ ಕೊಡದಿದ್ದರೆ ಮೊಬೈಲ್ ಶಾಪ್ ಬಳಿಯೇ ಹಲ್ಲೆ ಮಾಡುತ್ತಿದ್ದಳು. ಹೇಮಂತ್ ದಾಸ್‌ನ ಎದೆ ಹಾಗೂ ಹೊಟ್ಟೆಗೆ ಕಚ್ಚುತ್ತಿದ್ದಳು. ಹಣದ ವಿಚಾರಕ್ಕೆ, ದಾಂಪತ್ಯದಲ್ಲಿ ಖುಷಿ ಇಲ್ಲವೆಂದು ಪದೇಪದೆ ಜಗಳ ನಡೆಯುತ್ತಿತ್ತು. ಪತ್ನಿ ಕಿರುಕುಳದಿಂದ ಬೇಸತ್ತ ಪತಿ ಹೇಮಂತ್ 2023ರ ಡಿಸೆಂಬರ್‌ 1ರಂದು ನೆಲಮಂಗಲ ಟೌನ್ ಠಾಣೆಗೆ ದೂರು ನೀಡಿದ್ದರು. ಪೊಲೀಸ್ ಠಾಣೆಯಲ್ಲಿ ಇಡೀ ದಿನ ರಾಜಿ ಪಂಚಾಯಿತಿ ನಡೆಸಲಾಗಿತ್ತು.

ಬೆಂಗಳೂರು – ಮಂಗಳೂರು ಬಸ್ಸು ತಡೆದು ಮಾರಕಾಸ್ತ್ರದಿಂದ ಹಲ್ಲೆ- ಪುಡಿ ರೌಡಿಯ ಕಾಲಿಗೆ ಗುಂಡೇಟು, ಅರೆಸ್ಟ್‌

 ಹಾಸನ: ಬೆಂಗಳೂರಿನಿಂದ ಮಂಗಳೂರಿಗೆ  ತೆರಳುತ್ತಿದ್ದ ಖಾಸಗಿ ಬಸ್ ತಡೆದು ಲಾಂಗ್‌ನಿಂದ ಹಲ್ಲೆ ಮಾಡಿ ಅಟ್ಟಹಾಸ ಮೆರೆದಿದ್ದ ಪುಡಿರೌಡಿಯ ಕಾಲಿಗೆ ಪೊಲೀಸರು ಗುಂಡು ಹಾರಿಸಿದ ಘ...