Wednesday, 24 January 2024

ಚುನಾವಣೆ ನಂತರ ರಾಹುಲ್ ಗಾಂಧಿಯವರನ್ನು ಬಂಧಿಸಲಾಗುವುದು: ಅಸ್ಸಾಂ ಸಿಎಂ


ಸಿಬ್ಸಾಗರ್: ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ ಆರೋಪದ ಮೇಲೆ ಎಫ್‌ಐಆರ್ ದಾಖಲಾಗಿರುವ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಲೋಕಸಭೆ ಚುನಾವಣೆ ನಂತರ ಬಂಧಿಸಲಾಗುವುದು ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮ ಬುಧವಾರ ಹೇಳಿದ್ದಾರೆ.

ಮಂಗಳವಾರ ನಡೆದ ಕಾಂಗ್ರೆಸ್ ಪಕ್ಷದ ‘ಭಾರತ್ ಜೋಡೋ ನ್ಯಾಯ್ ಯಾತ್ರೆ’ ವೇಳೆ ಅಸ್ಸಾಂ ಪೊಲೀಸರು ಸ್ವಯಂ ಪ್ರೇರಿತವಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಇತರ ಹಲವು ನಾಯಕರ ವಿರುದ್ಧ “ಉದ್ದೇಶಪೂರ್ವಕ ಹಿಂಸಾಚಾರದ ಕೃತ್ಯಗಳ” ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.

“ನಾವು ಎಫ್‌ಐಆರ್ ದಾಖಲಿಸಿದ್ದೇವೆ. ವಿಶೇಷ ತನಿಖಾ ತಂಡ (ಎಸ್‌ಐಟಿ) ತನಿಖೆ ನಡೆಸಲಿದೆ ಮತ್ತು ಲೋಕಸಭೆ ಚುನಾವಣೆಯ ನಂತರ ರಾಹುಲ್ ಗಾಂಧಿಯವರನ್ನು ಬಂಧಿಸಲಾಗುವುದು ”ಎಂದು ಸಿಬ್ಸಾಗರ್ ಜಿಲ್ಲೆಯ ನಜೀರಾದಲ್ಲಿ ನಡೆದ ಕಾರ್ಯಕ್ರಮದ ಬಳಿಕ ಶರ್ಮಾ ಸುದ್ದಿಗಾರರಿಗೆ ಹೇಳಿಕೆ ನೀಡಿದ್ದಾರೆ.

”ಎಸ್‌ಐಟಿ ಮೂಲಕ ಸಮಗ್ರ ತನಿಖೆಗಾಗಿ ಪ್ರಕರಣವನ್ನು ಅಸ್ಸಾಂ ಸಿಐಡಿಗೆ ವರ್ಗಾಯಿಸಲಾಗಿದೆ” ಎಂದು ಪೊಲೀಸ್ ಮಹಾನಿರ್ದೇಶಕ ಜಿ.ಪಿ. ಸಿಂಗ್ ಹೇಳಿದ್ದಾರೆ.

ಅಸ್ಸಾಂ ನಲ್ಲಿ ನಡೆಯುತ್ತಿರುವ ಯಾತ್ರೆ ವೇಳೆ ಆಕ್ರೋಶ ಹೊರ ಹಾಕಿರುವ ರಾಹುಲ್ ಗಾಂಧಿ, ”ಹಿಮಂತ ಬಿಸ್ವಾ ಶರ್ಮಾ ದೇಶದ ಅತ್ಯಂತ ಭ್ರಷ್ಟ ಮುಖ್ಯಮಂತ್ರಿಯಾಗಿದ್ದು, ಅವರ ನಿಯಂತ್ರಕ ದೆಹಲಿಯಲ್ಲಿ ಕುಳಿತಿದ್ದಾರೆ. ಶರ್ಮಾ ಅವರಿಗೆ ರಾಹುಲ್ ಗಾಂಧಿಯನ್ನು ಹೆದರಿಸಬಹುದು ಎಂಬ ಕಲ್ಪನೆ ಎಲ್ಲಿಂದ ಬಂತು ಎಂದು ತಿಳಿದಿಲ್ಲ.ನನ್ನ ಮೇಲೆ ಎಷ್ಟು ಬೇಕೋ ಅಷ್ಟು ಕೇಸ್ ಹಾಕಲಿ ನನಗೆ ಭಯವಿಲ್ಲ ಎಂದು ತಿರುಗೇಟು ನೀಡಿದ್ದಾರೆ

Friday, 19 January 2024

ಗೋಕರ್ಣದಲ್ಲಿ ಪ್ರಭು ಶ್ರೀ ರಾಮ ತಪಸ್ಸು: ಬ್ರಹ್ಮ ಹತ್ಯೆ ದೋಷ ನಿವಾರಣೆಗೆ ರಾಮತೀರ್ಥ ದೇವಸ್ಥಾನ ಸ್ಥಾಪನೆ


ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಗೆ ಕ್ಷಣಗಣನೆ ಪ್ರಾರಂಭವಾಗಿದೆ. ಇತ್ತ ಪುರಾಣ ಪ್ರಸಿದ್ಧ ಗೋಕರ್ಣದಲ್ಲಿ ಶ್ರೀ ರಾಮ ಬ್ರಹ್ಮ ಹತ್ಯೆ ದೋಷ ನಿವಾರಣೆಗೆ ತಪಸ್ಸು ನಡೆಸಿದ ರಾಮ ತೀರ್ಥದಲ್ಲಿ ದೇವಸ್ಥಾನ ಜೀರ್ಣೋದ್ಧಾರದ ಜೊತೆ ಜೊತೆಗೆ ವಿಶೇಷ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. 

ಸುಂದರ ಶಾಂತತೆಯ ಪರಿಸರ ಹೊಂದಿರುವ ಈ ರಾಮತೀರ್ಥ ಕ್ಷೇತ್ರ ಹೆಚ್ಚು ಪ್ರಚಲಿತವಿಲ್ಲ.

ಇನ್ನು ಬ್ರಾಹ್ಮಣನಾದ ರಾವಣನನ್ನು ರಾಮ ವಧಿಸಿದ ನಂತರ ಬ್ರಹ್ಮ ಹತ್ಯೆ ದೋಷ ನಿವಾರಣೆಗಾಗಿ ಇಲ್ಲಿಗೆ ಬಂದು ತಪಸ್ಸು ಆಚರಿಸಿದ ಎಂಬ ಪ್ರತೀತಿ ಇದೆ. ಈ ಪುಷ್ಕರಣಿಯನ್ನು ರಾಮ ತನ್ನ ಬಾಣದಿಂದ ಸೃಷ್ಟಿಸಿದ ಎಂಬ ಪುರಾಣ ಕಥೆ ಇದ್ದು ಸರ್ವ ಋತುವಿನಲ್ಲೂ ಸ್ಫಟಿಕದಂತೆ ಶುದ್ಧವಾಗಿ ಹರಿಯುತ್ತದೆ.

ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ಇದ್ದು ಈ ವೇಳೆ ಈ ಪುರಾತನ ರಾಮಮಂದಿರದಲ್ಲಿ ವಿಶೇಷ ಪೂಜೆ ರಾಮ ಮೂರ್ತಿಯ ಪಲ್ಲಕ್ಕಿ ಉತ್ಸವ, ದೀಪೋತ್ಸವ ಸೇರಿದಂತೆ ಅನೇಕ ವಿಶೇಷ ಧಾರ್ಮಿಕ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ.

Wednesday, 10 January 2024

Yuva Nidhi Scheme; ನಾಳೆ ಶಿವಮೊಗ್ಗದಲ್ಲಿ ಚಾಲನೆ.

 


ಯುವನಿಧಿ ಯೋಜನೆಯಡಿ 2023ನೇ ಸಾಲಿನಲ್ಲಿ ಪದವೀಧರರಿಗೆ ಮತ್ತು ಡಿಪ್ಲೊಮಾ ಉತ್ತೀರ್ಣರಾಗಿ ಉದ್ಯೋಗ ದೊರಕದ ಅಭ್ಯರ್ಥಿಗಳಿಗೆ ಪದವಿ ಅಭ್ಯರ್ಥಿಗಳಿಗೆ ಮಾಸಿಕ 3 ಸಾವಿರ ರೂ. ಹಾಗೂ ಡಿಪ್ಲೊಮಾ ಅಭ್ಯರ್ಥಿಗಳಿಗೆ ಮಾಸಿಕ 1,500 ರೂ. ನಿರುದ್ಯೋಗ ಭತ್ತೆಯನ್ನು ನೀಡಲಾಗುತ್ತದೆ.ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೋಂದಣಿಗೆ ಉತ್ತಮ ಪ್ರತಿಕ್ರಿಯೆ ದೊರಕಿದ್ದು, ಈಗಾಗಲೇ 1,700ಕ್ಕೂ ಹೆಚ್ಚಿನ ಯುವಕ ಯುವತಿಯರು ಈ ಯೋಜನೆಯಡಿ ನೋಂದಾಯಿಸಿಕೊಂಡಿದ್ದಾರೆ.ಜ. 12ರಂದು ಸ್ವಾಮಿ ವಿವೇಕಾನಂದ ಜಯಂತಿಯ ಪ್ರಯುಕ ¤ರಾಷ್ಟ್ರೀಯ ಯುವ ದಿನದಂದು ಶಿವಮೊಗ್ಗ ಫ್ರೀಡಂ ಪಾರ್ಕ್‌ನಲ್ಲಿ ಮುಖ್ಯಮಂತ್ರಿಗಳ ಉಪಸ್ಥಿತಿಯಲ್ಲಿ ಯುವ ನಿಧಿ ಫಲಾನುಭವಿಗಳಿಗೆ ನೇರ ನಗದು ವರ್ಗಾವಣೆ ಕಾರ್ಯಕ್ರಮ ನಡೆಯಲಿದೆ. ಜಿಲ್ಲೆಯಲ್ಲಿ ಈ ಯೋಜನೆಯಡಿ ನೋಂದಾಯಿಸಿರುವ ಅಭ್ಯರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಜಿಲ್ಲಾ ಉದ್ಯೋಗಾಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Tuesday, 9 January 2024

ಸರ್ಕಾರಿ ಬಂಗಲೆ ಖಾಲಿ ಮಾಡದ ಮಾಜಿ ಸಂಸದೆ ಮಹುವಾ ಮೊಯಿತ್ರಾಗೆ ನೋಟಿಸ್ ಜಾರಿ


ಸರ್ಕಾರಿ ಬಂಗಲೆಯನ್ನು ತೆರವು ಮಾಡದಿದ್ದಕ್ಕಾಗಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮಾಜಿ ಸಂಸದೆ ಮಹುವಾ ಮೊಯಿತ್ರಾ ಅವರಿಗೆ ಎಸ್ಟೇಟ್ ನಿರ್ದೇಶನಾಲಯ (ಡಿಒಇ) ಸೋಮವಾರ ಶೋಕಾಸ್ ನೋಟಿಸ್ ನೀಡಿದೆ. ನಗರ ವಸತಿ ಮತ್ತು ನಗರಾಭಿವೃದ್ಧಿ ಸಚಿವಾಲಯದ ಮೂಲಗಳನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ಪಿಟಿಐ ಈ ಮಾಹಿತಿಯನ್ನು ನೀಡಿದೆ.ಕಳೆದ ವರ್ಷ ಡಿಸೆಂಬರ್ 8 ರಂದು ತೃಣಮೂಲ ಕಾಂಗ್ರೆಸ್ ಸಂಸದೆ ಮೊಯಿತ್ರಾ ಅವರನ್ನು ಲೋಕಸಭೆಯಿಂದ ಉಚ್ಚಾಟಿಸಲಾಗಿತ್ತು. ಅವರ ಖಾತೆಯನ್ನು ರದ್ದುಗೊಳಿಸಿದ್ದರಿಂದ ಜನವರಿ 7 ರೊಳಗೆ ಬಂಗಲೆಯನ್ನು ಖಾಲಿ ಮಾಡುವಂತೆ ತಿಳಿಸಲಾಯಿತು. ಆದರೆ ಇದುವರೆಗೂ ಬಂಗಲೆ ಖಾಲಿ ಮಾಡದ ಕಾರಣ ಶೋಕಾಸ್ ನೋಟಿಸ್‌ ನೀಡಿದ್ದು 3 ದಿನಗಳಲ್ಲಿ ಉತ್ತರಿಸುವಂತೆ ಎಸ್ಟೇಟ್ ನಿರ್ದೇಶನಾಲಯ ಕೇಳಿದೆ.ಮೊಯಿತ್ರಾ ಅವರಿಗೆ ನೀಡಲಾದ ಶೋಕಾಸ್ ನೊಟೀಸ್ ನಲ್ಲಿ ಸರ್ಕಾರಿ ಬಂಗಲೆಯನ್ನು ಏಕೆ ಇನ್ನೂ ತೆರವು ಮಾಡಿಲ್ಲ ಎಂದು ಕೇಳಲಾಗಿದ್ದು ಇದಕ್ಕೆ ಉತ್ತರ ನೀಡುವಂತೆ ಕೇಳಿದೆ.

ರಾಜ್ಯ4 ವರ್ಷದ ಮಗುವನ್ನು ಕೊಂದು ಬ್ಯಾಗ್‌ ನಲ್ಲಿ ಕೊಂಡೊಯ್ಯುತ್ತಿದ್ದ ಸಿಇಒ ಸುಚನಾ ಬಂಧನ


ಗೋವಾದಲ್ಲಿ ತನ್ನ 4 ವರ್ಷದ ಮಗನನ್ನು ಕೊಂದು ಶವವನ್ನು ಬ್ಯಾಗ್‌ ನಲ್ಲಿಟ್ಟು ಕರ್ನಾಟಕಕ್ಕೆ ಪ್ರಯಾಣಿಸುತ್ತಿದ್ದ ಬೆಂಗಳೂರಿನ ಕೃತಕ ಬುದ್ಧಿಮತ್ತೆ ಸ್ಟಾರ್ಟ್‌ ಅಪ್‌ ಕಂಪನಿಯ ಸಿಇಒ ಸುಚನಾ ಸೇಠ್‌ (39ವರ್ಷ) ಎಂಬಾಕೆಯನ್ನು ಚಿತ್ರದುರ್ಗದಲ್ಲಿ ಬಂಧಿಸಿರುವ ಘಟನೆ ವರದಿಯಾಗಿದೆ.ಬೆಂಗಳೂರಿನ ಮೈಂಡ್‌ ಫುಲ್‌ AI ಲ್ಯಾಬ್‌ ಸ್ಟಾರ್ಟ್‌ ಅಪ್‌ ನ ಸಿಇಒ ಸುಚನಾ ಸೇಠ್‌ ಎಂಬಾಕೆಯನ್ನು ಸೋಮವಾರ ಚಿತ್ರದುರ್ಗದ ಬಳಿ ಆಕೆಯ ಮಗನ ಶವವಿದ್ದ ಬ್ಯಾಗ್‌ ಜತೆಗೆ ಬಂಧಿಸಲಾಗಿದೆ. ಉತ್ತರ ಗೋವಾದ ಕ್ಯಾಂಡೋಲಿಮ್‌ ಅಪಾರ್ಟ್‌ ಮೆಂಟ್‌ ನಲ್ಲಿ ತನ್ನ ಮಗನನ್ನು ಹತ್ಯೆಗೈದಿರುವುದಾಗಿ ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.


ಉತ್ತರ ಗೋವಾದ ಕ್ಯಾಂಡೋಲಿಮ್‌ ನಲ್ಲಿರುವ ಸೋಲ್‌ ಬನ್ಯಾನ್‌ ಗ್ರಾಂಡೆ ಅಪಾರ್ಟ್‌ ಮೆಂಟ್‌ ಗೆ ಸುಚನಾ ಸೇಠ್‌ ತನ್ನ ಮಗನೊಂದಿಗೆ ಶನಿವಾರ ಚೆಕ್‌ ಇನ್‌ ಆಗಿದ್ದಳು. ಸೋಮವಾರ ಸೇಠ್ ರೂಂ ಚೆಕ್‌ ಔಟ್‌ ಮಾಡಿದ್ದು, ಸಿಬಂದಿ ಬಳಿ ಬೆಂಗಳೂರಿಗೆ ತೆರಳಲು ಕಾರು ಬುಕ್‌ ಮಾಡಲು ಹೇಳಿದ್ದಳು. ಕಾರು ಬೇಡ, ವಿಮಾನದಲ್ಲಿ ತೆರಳಿ ಎಂಬ ಸಿಬಂದಿಗಳ ಸಲಹೆಯನ್ನು ಆಕೆ ತಿರಸ್ಕರಿಸಿದ್ದಳಂತೆ!ಈ ಸಂದರ್ಭದಲ್ಲಿ ಸುಚನಾ ಸೇಠ್‌ ಜತೆ ಮಗು ಇಲ್ಲದಿರುವುದನ್ನು ಅಪಾರ್ಟ್‌ ಮೆಂಟ್‌ ಸಿಬಂದಿಗಳು ಗಮನಿಸಿದ್ದರು. ಆಕೆ ಕಾರಿನಲ್ಲಿ ಹೊರಟು ಹೋದ ನಂತರ ಹೌಸ್‌ ಕೀಪರ್‌ ರೂಂ ಅನ್ನು ಪರಿಶೀಲಿಸಿದಾಗ ರಕ್ತದ ಕಲೆಗಳು ಬಿದ್ದಿರುವುದು ಗಮನಕ್ಕೆ ಬಂದಿತ್ತು.


ಕೂಡಲೇ ಈ ಬಗ್ಗೆ ಗೋವಾ ಪೊಲೀಸರಿಗೆ ಮಾಹಿತಿ ನೀಡಿದ್ದರು. ಅದರಂತೆ ಕಾರು ಚಾಲಕನಿಗೆ ಕರೆ ಮಾಡಿ, ಸೇಠ್‌ ಬಳಿ ಮಗು ಎಲ್ಲಿ ಎಂದು ಪ್ರಶ್ನಿಸಿದ್ದರು. ಆಗ ಆಕೆ ಆತನನ್ನು ಗೆಳೆಯನ ಜತೆ ಬಿಟ್ಟಿರುವುದಾಗಿ ಹೇಳಿ, ವಿಳಾಸ ಕೊಟ್ಟಿದ್ದಳು. ಪೊಲೀಸರು ವಿಳಾಸ ಹುಡುಕಿದಾಗ ಅದು ನಕಲಿ ಎಂದು ತಿಳಿಯಿತು.!


ಗೋವಾ ಪೊಲೀಸರು ಮತ್ತೆ ಕಾರು ಚಾಲಕನಿಗೆ ಕರೆ ಮಾಡಿದ್ದರು. ಆದರೆ ಈ ಬಾರಿ ಅವರು ಸುಚನಾಳಿಗೆ ಅರ್ಥವಾಗಬಾರದು ಎಂದು ಚಾಲಕನ ಬಳಿ ಕೊಂಕಣಿ ಭಾಷೆಯಲ್ಲಿ ಸಂಭಾಷಣೆ ನಡೆಸಿ, ಕಾರನ್ನು ಸಮೀಪದ ಚಿತ್ರದುರ್ಗ ಠಾಣೆಗೆ ಕೊಂಡೊಯ್ಯುವಂತೆ ಸೂಚನೆ ನೀಡಿದ್ದರು!


ನಂತರ ಚಾಲಕ ಕಾರನ್ನು ನೇರವಾಗಿ ಚಿತ್ರದುರ್ಗ ಪೊಲೀಸ್‌ ಠಾಣೆಗೆ ಕೊಂಡೊಯ್ದಿದ್ದ. ಬಳಿಕ ಪೊಲೀಸರು ಸುಚನಾ ಸೇಠ್‌ ಳನ್ನು ಬಂಧಿಸಿದ್ದರು. ಕಾರಿನೊಳಗೆ ಇದ್ದ ಬ್ಯಾಗ್‌ ನಲ್ಲಿ ಮಗುವಿನ ಶವ ಪತ್ತೆಯಾಗಿತ್ತು.


AI ಡೆವಲಪರ್‌, ಸೇಠ್‌ ಪತಿ ವೆಂಕಟ ರಾಮನ್‌ ಚಿತ್ರದುರ್ಗಕ್ಕೆ ಆಗಮಿಸಿದ್ದು, ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸುಚನಾ ಸೇಠಳನ್ನು ಹೆಚ್ಚಿನ ತನಿಖೆಗಾಗಿ ಗೋವಾಕ್ಕೆ ಕರೆ ತರಲಾಗಿದೆ

“ನಾವೆಲ್ಲರೂ ಹಿಂದುಗಳು…….”: ರಾಮಮಂದಿರ ಉದ್ಘಾಟನೆ ಕುರಿತು ಡಿಸಿಎಂ ಹೇಳಿಕೆ ಹೀಗಿದೆ.


ಕೇರಳಕ್ಕೆ ಭೇಟಿ ಕೊಟ್ಟ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಜನವರಿ 22ರಂದು ಅಯೋಧ್ಯೆಯಲ್ಲಿ ಅದ್ದೂರಿಯಾಗಿ ನಡೆಯಲಿರುವ ರಾಮಮಂದಿರದ ಶಂಕುಸ್ಥಾಪನೆ ಸಮಾರಂಭವನ್ನು ರಾಜ್ಯದಲ್ಲಿ ಆಚರಿಸುವ ಕುರಿತು ಕರ್ನಾಟಕ ಸರ್ಕಾರ ಮಾಡಿದ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದು, ಅಂತಿಮವಾಗಿ ನಾವೆಲ್ಲರೂ ಹಿಂದೂಗಳು ಎಂದು ಹೇಳಿದ್ದಾರೆ.ರಾಮಚಂದ್ರನ್ ಪ್ರತಿಷ್ಠಾನದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಳ್ಳಲು ಕೇರಳ ರಾಜ್ಯ ರಾಜಧಾನಿಗೆ ಆಗಮಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು ಡಿಕೆಶಿ, “ಅಂತಿಮವಾಗಿ ನಾವೆಲ್ಲರೂ ಹಿಂದೂಗಳು. ಬಿಜೆಪಿ ಆಡಳಿತದಲ್ಲಿರುವ ಕೇಂದ್ರವು ಈ ಸಮಾರಂಭದಲ್ಲಿ ಯಾರನ್ನು ಆಯ್ಕೆ ಮಾಡಬೇಕೆಂದು ನಿರ್ಧರಿಸಲು ಆಯ್ಕೆ ವಿಧಾನವನ್ನು ಅನುಸರಿಸುತ್ತಿದೆ” ಎಂದರು.ರಾಮಮಂದಿರ ಖಾಸಗಿ ಆಸ್ತಿಯಲ್ಲ. ಅದು ಸಾರ್ವಜನಿಕ ಆಸ್ತಿ. ದೇಶದಲ್ಲಿ ಹಲವಾರು ನಾಯಕರು ಮತ್ತು ಮುಖ್ಯಮಂತ್ರಿಗಳಿದ್ದಾರೆ. ಪ್ರತಿಯೊಂದು ಧರ್ಮ ಮತ್ತು ಚಿಹ್ನೆಯು ಯಾವುದೇ ವ್ಯಕ್ತಿಗೆ ಸೇರಿಲ್ಲ. ನಾವು ಎಲ್ಲಾ ಜನರ ಭಾವನೆಗಳನ್ನು ಗೌರವಿಸುತ್ತೇವೆ” ಎಂದು ಹೇಳಿದರು.

Monday, 8 January 2024

PM Modi ವಿರುದ್ಧ ಆಕ್ಷೇಪಾರ್ಹ ಹೇಳಿಕೆ: ಮಾಲ್ಡೀವ್ಸ್ 3 ಸಚಿವರ ಅಮಾನತು!


ಪ್ರಧಾನಿ ನರೇಂದ್ರ ಮೋದಿಯವರ ಇತ್ತೀಚಿನ ಲಕ್ಷದ್ವೀಪ ಪ್ರವಾಸದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಆಕ್ಷೇಪಾರ್ಹ ಹೇಳಿಕೆಗಳನ್ನು ಹಂಚಿಕೊಂಡ ನಂತರ ಮಾಲ್ಡೀವ್ಸ್ ಸರಕಾರ ತನ್ನ ಮೂವರು ಸಚಿವರನ್ನು ಭಾನುವಾರ ಅಮಾನತುಗೊಳಿಸಿದೆ.ಭಾರತವು ದ್ವೀಪ ರಾಷ್ಟ್ರ ದೊಂದಿಗೆ ಈ ಗಂಭೀರ ವಿಚಾರವನ್ನು ಪ್ರಸ್ತಾಪಿಸಿದ ನಂತರ ಸಚಿವರಾದ ಮಲ್ಶಾ ಶರೀಫ್, ಮರಿಯಮ್ ಶಿಯುನಾ ಮತ್ತು ಅಬ್ದುಲ್ಲಾ ಮಹಜೂಮ್ ಮಜೀದ್ ಅವರನ್ನು ತಮ್ಮ ಸ್ಥಾನಗಳಿಂದ ಅಮಾನತುಗೊಳಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಮಾಲ್ಡೀವ್ಸ್ ವಕ್ತಾರರು ತಿಳಿಸಿದ್ದಾರೆ.ಗಮನಾರ್ಹ ವಿಚಾರವೆಂದರೆ , ಪ್ರಧಾನಿ ಮೋದಿ ಲಕ್ಷದ್ವೀಪ ಭೇಟಿಯ ಚಿತ್ರಗಳನ್ನು ಪೋಸ್ಟ್ ಮಾಡಿದ ನಂತರ ಮತ್ತು ಭಾರತೀಯರಿಗೆ ಪ್ರವಾಸಿ ತಾಣವಾಗಿ ದ್ವೀಪವನ್ನು ಪ್ರವಾಸಿ ತಾಣವಾಗಿ ಬೆಳೆಸಬೇಕೆಂದು ಕರೆ ನೀಡಿದ ಬಳಿಕ, ಪ್ರಧಾನಿ ಮೋದಿಯವನ್ನು ವಿದೂಷಕ ಮತ್ತು ಗೊಂಬೆ ಎಂದು ಕರೆದಿದ್ದರು. ಸದ್ಯ ಸಚಿವರುಗಳು ಮಾಡಿದ ಎಕ್ಸ್ ಪೋಸ್ಟ್ ಗಳನ್ನು ಅಳಿಸಲಾಗಿದೆ.

Sunday, 7 January 2024

ಡಿಕೆಶಿ, ಫೇಸ್‌ಬುಕ್‌ ಖಾತೆ ನಿರ್ವಾಹಕರ ವಿರುದ್ಧ ದೂರು.


ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ಮತ್ತು ಸಿ.ಟಿ.ರವಿ, ಸುನೀಲ್‌ ಕುಮಾರ್‌ ಹಾಗೂ ಸಂಸದ ಪ್ರತಾಪ್‌ ಸಿಂಹ ಅವರ ಫೋಟೋಗಳನ್ನು ದುರ್ಬಳಕೆ ಮಾಡಿಕೊಂಡು, ಅವರ ವಿರುದ್ಧ ಅವಹೇಳನಕಾರಿ ಪೋಸ್ಟ್‌ ಮಾಡಿದ ಆರೋಪದಡಿ ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿಯೂ ಆದ ಡಿ. ಕೆ.ಶಿವಕುಮಾರ್‌ ಮತ್ತು ಅವರ ಫೇಸ್‌ಬುಕ್‌ ಖಾತೆಯ ನಿರ್ವಾ‌ಹಕರ ವಿರುದ್ಧ ಬಿಜೆಪಿ ಕಾನೂನು ಘಟಕದ ರಾಜ್ಯ ಸಂಚಾಲಕ ಯೋಗೇಂದ್ರ ಹೂಡಘಟ್ಟ ಎಂಬವರು ಹೈಗ್ರೌಂಡ್ಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.ಕಾಂಗ್ರೆಸ್‌ನ ಅಧಿಕೃತ ಫೇಸ್‌ಬುಕ್‌ ಖಾತೆಯಲ್ಲಿ ಬಿಜೆಪಿಯ ಹಿರಿಯ ನಾಯಕರ ಮಾರ್ಫ್ ಮಾಡಿದ ಫೋಟೋಗಳನ್ನು ಬಳಸಿ ತಿರುಚಿದ ಹಾಗೂ ದಾರಿತಪ್ಪಿಸುವ ಸುಳ್ಳು ಪೋಸ್ಟ್‌ಗಳನ್ನು ಹಾಕಲಾಗಿದೆ. ಈ ಮೂಲಕ ಉದ್ದೇಶಪೂರ್ವಕವಾಗಿ ರಾಜ್ಯದ ಜನರಲ್ಲಿ ದ್ವೇಷ ಹುಟ್ಟಿಸಲು ಹಾಗೂ ಬಿಜೆಪಿ ನಾಯಕರ ಹೆಸರಿಗೆ ಮಸಿ ಬಳಿಯಲು ಯತ್ನಿಸಲಾಗಿದೆ. ಈ ರೀತಿಯ ಫೋಸ್ಟ್‌ಗಳು ಬಿಜೆಪಿ ವಿರುದ್ಧ ಕನ್ನಡಿಗರನ್ನು ಎತ್ತಿಕಟ್ಟುವ ಮತ್ತು ಶಾಂತಿಗೆ ಭಂಗ ತರುವ ಉದ್ದೇಶ ಹೊಂದಿದೆ. ಇದು ಕೆಲ ವರ್ಗದ ಜನರನ್ನು ಉದ್ವಿಘ್ನಗೊಳಿಸುತ್ತದೆ. ಈ ರೀತಿ ಗೊಂದಲ ಉಂಟುಮಾಡುತ್ತಿರುವ ಬಗ್ಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಮತ್ತು ಅವರ ಫೇಸ್‌ಬುಕ್‌ ಪೇಜ್‌ ನಿರ್ವಹಿಸುವ ವ್ಯಕ್ತಿಗಳಿಗೆ ಗೊತ್ತಿದ್ದರೂ, ನಿರಂತರವಾಗಿ ಆರೋಪ ಮಾಡುತ್ತಿದ್ದಾರೆ. ಆದರಿಂದ ಶಿವಕುಮಾರ್‌ ಹಾಗೂ ಅವರ ಫೇಸ್‌ಬುಕ್‌ ಪೇಜ್‌ ನಿರ್ವಹಿಸುವ ವ್ಯಕ್ತಿಗಳ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಯೋಗೇಂದ್ರ ಹೂಡಘಟ್ಟ ದೂರಿನಲ್ಲಿ ಆರೋಪಿಸಿದ್ದಾರೆ.

Friday, 5 January 2024

ಬೆಂಗಳೂರು: ರಾಷ್ಟ್ರೀಯ ಷೇರು ವಿನಿಮಯ ಕೇಂದ್ರಕ್ಕೆ ಬಾಂಬ್​ ಬೆದರಿಕೆ ಕರೆ.


ಬೆಂಗಳೂರಿನಲ್ಲಿ ಮೇಲಿಂದ ಮೇಲೆ ಹುಸಿ ಬಾಂಬ್​ ಬೆದರಿಕೆ ಕರೆಗಳು ಬರುತ್ತಿವೆ. ನಿನ್ನೆ (ಜ.06) ವಿಶ್ವೇಶ್ವರಯ್ಯ ಮುಸ್ಯಿಯಂಗೆ ಬಾಂಬ್ ಬೆದರಿಕೆ ಮೇಲ್​​ ಬಂದಿತ್ತು. ಇದಾದ ಬೆನ್ನಲ್ಲೇ ಕನ್ನಿಂಗ್ ಹ್ಯಾಮ್ ರಸ್ತೆಯಲ್ಲಿರುವ ರಾಷ್ಟ್ರೀಯ ಷೇರು ವಿನಿಮಯ ಕೇಂದ್ರಕ್ಕೆ ಬಾಂಬ್ ಬೆದರಿಕೆ ಕರೆ ಬಂದಿದೆ.ಆರೋಪಿಗಳು ಜನವರಿ 3ರಂದು ಮುಂಬೈನ ರಾಷ್ಟ್ರೀಯ ಷೇರು ವಿನಿಮಯ ಕೇಂದ್ರ ಕಚೇರಿಗೆ ಕರೆ ಮಾಡಿ, ಬೆಂಗಳೂರಿನ ಕಚೇರಿಯಲ್ಲಿ ಬಾಂಬ್​ ಇಡಲಾಗಿದೆ ಎಂದು ಹೇಳಿದ್ದಾರೆ.ಕೂಡಲೇ ಮುಂಬೈನ ಎನ್​ಎಸ್​ಇ ಕಚೇರಿ ಅಧಿಕಾರಿಗಳು ಮಧ್ಯರಾತ್ರಿ ಒಂದು ಗಂಟೆಗೆ ಸುಮಾರಿಗೆ ವಿಧಾನಸೌಧ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದರು. ತಕ್ಷಣ ಪೊಲೀಸರು ಬಾಂಬ್ ನಿಷ್ಕ್ರಿಯ ದಳದೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪರಿಶೀಲನೆ ವೇಳೆ ಯಾವುದೇ ಸ್ಪೋಟಕ‌ವಸ್ತು ಪತ್ತೆಯಾಗಿಲ್ಲ. ಸದ್ಯ ವಿಧಾನಸೌಧ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Wednesday, 3 January 2024

ಪುತ್ತೂರು ಕೊಠಡಿಯಲ್ಲಿ ಕೂಡಿ ಹಾಕಿದ್ದ ವಿವಾಹಿತ ಮಹಿಳೆಯ ರಕ್ಷಣೆ


ಅನಾರೋಗ್ಯದ ನೆಪವೊಡ್ಡಿ ಮೂರು ತಿಂಗಳಿನಿಂದ ವಿವಾಹಿತ ಮಹಿಳೆಯನ್ನು ಕನಿಷ್ಠ ಸೌಲಭ್ಯವೂ ಇಲ್ಲದ ಕೊಠಡಿಯಲ್ಲಿ ಕೂಡಿ ಹಾಕಿದ ಮಾಹಿತಿ ಪಡೆದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮತ್ತು ಆರೋಗ್ಯ ಇಲಾಖೆಯು ಪೊಲೀಸರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಅವರನ್ನು ರಕ್ಷಿಸಿ ಚಿಕಿತ್ಸೆಗಾಗಿ ಪುತ್ತೂರಿನ ಸರಕಾರಿ ಆಸ್ಪತ್ರೆಗೆ ದಾಖಲಿಸಿದ ಘಟನೆ ಕೆಮ್ಮಿಂಜೆ ಗ್ರಾಮದ ಇಡಬೆಟ್ಟು ಸಮೀಪದ ಕರೆಜ್ಜದಲ್ಲಿ ನಡೆದಿದೆ.ಶ್ರೀಪತಿ ಹೆಬ್ಬಾರ್‌ ಅವರ ಪತ್ನಿ ಆಶಾಲತಾ ದಿಗ್ಬಂಧನಕ್ಕೆ ಒಳಗಾಗಿದ್ದ ಮಹಿಳೆ. ಮನೆ ಪಕ್ಕದ ಸಿಮೆಂಟ್‌ ಶೀಟ್‌ ಅಳವಡಿಸಿದ ಕಿಟಕಿ, ವಿದ್ಯುತ್‌ ಬೆಳಕು ಇಲ್ಲದ ಒಂದೇ ಬಾಗಿಲಿನ ಕೋಣೆಯಲ್ಲಿ ದಿಗ್ಬಂಧನದಲ್ಲಿರಿಸಲಾಗಿತ್ತು. ಅನಾಮಧೇಯ ಕರೆಯ ಹಿನ್ನೆಲೆಯಲ್ಲಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದಾರೆ.ಆಶಾಲತಾ ಮೂಲತಃ ವಿಟ್ಲ ಸಮೀಪದವರು. ಕೆಲವು ವರ್ಷಗಳ ಹಿಂದೆ ಶ್ರೀಪತಿ ಆಕೆಯನ್ನು ಮದುವೆಯಾಗಿದ್ದರು. ಅಂತರ್ಜಾತಿ ವಿವಾಹ ಇದಾಗಿದ್ದು ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಆರಂಭದಲ್ಲಿ ಅನ್ಯೋನ್ಯವಾಗಿದ್ದರು ಎನ್ನಲಾಗಿದೆ. ಬಳಿಕ ಆಶಾ ಅವರ ಆರೋಗ್ಯ ಸರಿ ಇಲ್ಲ ಎಂಬ ಕಾರಣಕ್ಕಾಗಿ ಮನೆ ಸಮೀಪದ ಕೊಠಡಿಯೊಳಗೆ ಕೂಡಿ ಹಾಕಲಾಗಿತ್ತು ಎನ್ನುವ ಮಾಹಿತಿ ಲಭಿಸಿದೆ.ಗೋದಾಮು ಮಾದರಿಯ ಕೊಠಡಿಯೊಳಗೆ ದಿನ ಕಳೆಯುತ್ತಿದ್ದ ಆಶಾಲತಾಗೆ ಹೊರ ಜಗತ್ತಿನ ಸಂಪರ್ಕವೇ ಇರಲಿಲ್ಲ. ಬಾಗಿಲಿಗೆ ಬೀಗ ಜಡಿಯಲಾಗಿತ್ತು. ಮಲ-ಮೂತ್ರವೆಲ್ಲ ಕೊಠಡಿಯೊಳಗೇ ಆಗುತ್ತಿತ್ತು. ಚಾಪೆ ಕೂಡ ಇಲ್ಲದ ಕಾರಣ ನೆಲದಲ್ಲೇ ಮಲಗಬೇಕಿತ್ತು. ಕೊಠಡಿ ದುರ್ವಾಸನೆಯಿಂದ ಕೂಡಿತ್ತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಮನೆಯವರು ದಿನಕ್ಕೆ ಒಂದು ಬಾರಿ ಬಿಸ್ಕೆಟ್‌, ಚಹಾ ಬಿಟ್ಟರೆ ಬೇರೇನೂ ಕೊಡುತ್ತಿರಲಿಲ್ಲ ಎನ್ನಲಾಗಿದೆ. ದೇಹ ಕ್ಷೀಣಿಸಿದ ಪರಿಣಾಮ ಬಿದ್ದುಕೊಂಡ ಸ್ಥಿತಿಯಲ್ಲಿದ್ದ ಆಶಾ ಅವರನ್ನು ಅಧಿಕಾರಿಗಳು ಕೊಠಡಿಯಿಂದ ಹೊರತಂದು ಸ್ನಾನ ಮಾಡಿಸಿ ಆಸ್ಪತ್ರೆಗೆ ದಾಖಲಿಸಿದರು.

ಉಡುಪಿಹಿರಿಯ ಬಿಜೆಪಿ ಮುಖಂಡ, ಹೋಟೇಲ್ ಉದ್ಯಮಿ ಬಿ.ಸುಧಾಕರ್ ಶೆಟ್ಟಿ ನಿಧನ


ಹಿರಿಯ ಬಿಜೆಪಿ ಮುಖಂಡ, ಶಾರದಾ ಇಂಟರ್ನ್ಯಾಷನಲ್ ಹೋಟೇಲ್ ಮಾಲೀಕ ಬಿ.ಸುಧಾಕರ್ ಶೆಟ್ಟಿ(72) ಇಂದು ಬೆಳಗ್ಗೆ ಉಡುಪಿಯ ಗಾಂಧಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.ಸುಧಾಕರ್ ಶೆಟ್ಟಿ ಹಲವು ವರ್ಷಗಳಿಂದ ಹೊಟೇಲ್ ಉದ್ಯಮ ನಡೆಸುತ್ತಿದ್ದರು. 2009ರಿಂದ 2012ರವರೆಗೆ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಅವರು, ಉಡುಪಿ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ 1999ರಲ್ಲಿ ಯು.ಆರ್.ಸಭಾಪತಿ ವಿರುದ್ಧ ಸೋಲು ಕಂಡಿದ್ದರು. 2004ರ ಚುನಾವಣೆಯಲ್ಲಿ ಟಿಕೆಟ್ ಬಿಜೆಪಿಯಿಂದ ಟಿಕೆಟ್ ನಿರಾಕರಿಸಿದ ಹಿನ್ನೆಲೆಯಲ್ಲಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. 2013ರ ಚುನಾವಣೆಯಲ್ಲಿ ಹಾಲಿ ಶಾಸಕರಾಗಿದ್ದ ರಘುಪತಿ ಭಟ್ ಸಿಡಿ ವಿವಾದದಿಂದ ಸ್ಪರ್ಧಿಸಲು ಹಿಂದೆ ಸರಿದ ಹಿನ್ನೆಲೆಯಲ್ಲಿ ಸುಧಾಕರ್ ಶೆಟ್ಟಿ ಕಣಕ್ಕಿಳಿದಿದ್ದರು. ಆದರೆ ಅವರು ಪ್ರಮೋದ್ ಮಧ್ವರಾಜ್ ವಿರುದ್ಧ ಸೋಲು ಅನುಭವಿಸಿದ್ದರು. ಬಿಜೆಪಿ ಪಕ್ಷದಲ್ಲಿ ವಿವಿಧ ಹುದ್ದೆಗಳನ್ನು ಅವರು ಅಲಂಕರಿಸಿದ್ದರು

ವಿಪಕ್ಷಗಳ ಇಂಡಿಯಾ ಒಕ್ಕೂಟಕ್ಕೆ ನಿತೀಶ್‌ ಕುಮಾರ್‌ ಸಂಚಾಲಕ?


ವಿಪಕ್ಷ ಐಎನ್‌ಡಿಐಎ ಒಕ್ಕೂಟಕ್ಕೆ ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಸಂಚಾಲಕರಾಗಿ ನೇಮಕವಾಗುವ ಸಾಧ್ಯತೆ ಇದೆ.  ಒಕ್ಕೂಟದಲ್ಲಿ ಅಧ್ಯಕ್ಷ ಹಾಗೂ ಸಂಚಾಲಕ ಸ್ಥಾನ ಮಹತ್ವದ ಪಾತ್ರವಹಿ ಸಲಿದ್ದು, ಗುರುವಾರ ಝೂಮ್‌ ಮೂಲಕ ನಡೆಯ ಲಿರುವ ಒಕ್ಕೂಟದ ಸಭೆಯಲ್ಲಿ ನಿತೀಶ್‌ ಆಯ್ಕೆಯನ್ನು ಅಧಿಕೃತಗೊಳಿಸಲಾಗುವುದು ಎಂದು ಮೂಲಗಳು ತಿಳಿಸಿವೆ. ಜೆಡಿಯು ರಾಷ್ಟ್ರೀಯ ಅಧ್ಯಕ್ಷ ನಿತೀಶ್‌ರನ್ನು ಸಂಚಾಲಕರನ್ನಾಗಿ ನೇಮಿಸುವ ಸಂಬಂಧ ಆರ್‌ಜೆಡಿ ಮುಖ್ಯಸ್ಥ ಲಾಲು ಯಾದವ್‌ ಜತೆಗೂ ಕಾಂಗ್ರೆಸ್‌ ಮಾತುಕತೆ ನಡೆಸಿದೆ. ಇತರ ಪಾಲುದಾರ ಪಕ್ಷಗಳ ಜತೆಯೂ ಸಮಾಲೋಚಿಸಿ ನೇಮಕವನ್ನು ಅಂತಿಮಗೊಳಿಸಲಾಗುತ್ತದೆ. ಇನ್ನೊಂದೆಡೆ, ನಿತೀಶ್‌ ಅವರು ಶಿವಸೇನೆ (ಯುಬಿಟಿ) ಅಧ್ಯಕ್ಷ ಉದ್ಧವ್‌ ಠಾಕ್ರೆ ಜತೆ ಮಾತುಕತೆ ನಡೆಸಿದ್ದಾರೆ. ದಿಲ್ಲಿ ಮುಖ್ಯಮಂತ್ರಿ, ಆಪ್‌ ಮುಖ್ಯಸ್ಥ ಕೇಜ್ರಿವಾಲ್‌ ಕೂಡ ನಿತೀಶ್‌ ನೇಮಕಕ್ಕೆ ಸಹಮತ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ.ಇಂಡಿಯಾ ಒಕ್ಕೂಟದ ಸೀಟು ಹಂಚಿಕೆ ಪ್ರಕ್ರಿಯೆ ಶುರುವಾಗುವ ಮುನ್ನವೇ ಜೆಡಿಯು ಲೋಕಸಭೆ ಚುನಾವಣೆಗೆ ಅರುಣಾಚಲ ಪ್ರದೇಶದಲ್ಲಿ ಮೊದಲ ಅಭ್ಯರ್ಥಿಯನ್ನು ಘೋಷಿಸಿದೆ. ಪಕ್ಷದ ರಾಜ್ಯಾಧ್ಯಕ್ಷ ರುಹಿ ತಂಗುಂಗ್‌ ಅರುಣಾಚಲ ಪಶ್ಚಿಮ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆ ಎಂದಿದೆ.

ಶ್ರೀಕಾಂತ್ ಪೂಜಾರಿ ಪರ ಕೋಮುದ್ವೇಷ ಸೃಷ್ಟಿಸುವ ಹೇಳಿಕೆ: ರಾಜ್ಯಾಧ್ಯಕ್ಷ ವಿಜಯೇಂದ್ರ ವಿರುದ್ಧ ಕಾಂಗ್ರೆಸ್‌ ದೂರು


Sauram News 

ಬೆಂಗಳೂರು, ಜ.03: ಕೋಮುದ್ವೇಷ ಸೃಷ್ಟಿಸುವ ಹೇಳಿಕೆ ನೀಡಿದ್ದಾರೆಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧ ಕಾಂಗ್ರೆಸ್‌ ದೂರು ನೀಡಿದೆ. ಶ್ರೀಕಾಂತ್ ಪೂಜಾರಿ ಪರ ಹೇಳಿಕೆ ನೀಡಿದ್ದ ಬಿ.ವೈ.ವಿಜಯೇಂದ್ರ ವಿರುದ್ದ ಇದೀಗ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್‌ಗೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮನೋಹರ್ ಎಂಬುವವರು ದೂರು ಸಲ್ಲಿಸಿದ್ದಾರೆ.ಶ್ರೀಕಾಂತ್ ಪೂಜಾರಿ ಬಂಧನ ಖಂಡಿಸಿ ನಿನ್ನೆ(ಜ.02) ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ‘ಶ್ರೀಕಾಂತ್ ಪೂಜಾರಿ ಅವರನ್ನು ಬಿಡುಗಡೆ ಮಾಡುವವರೆಗೂ ಬಿಜೆಪಿ ಸುಮ್ಮನಿರಲ್ಲ, ನಾಳೆ ಬೃಹತ್ ಹೋರಾಟ ಮೂಲಕ ಈ ಸರ್ಕಾರಕ್ಕೆ ತಕ್ಕ ಉತ್ತರ ಕೊಡುತ್ತೇವೆ. ಈ ಸರ್ಕಾರ ಹಿಂದೂ ಬಿಜೆಪಿ‌ ಕಾರ್ಯಕರ್ತರನ್ನು ಬೆದರಿಸುವ ಕಲಸ ಮಾಡುತ್ತಿದೆ. ಇಂತಹ ಗೊಡ್ಡು ಬೆದರಿಕೆಗೆ‌ ನಾವು ಹೆದರುವುದಿಲ್ಲ. ಇದು ಹಿಂದೂ ವಿರೋಧಿ, ರಾಮ ವಿರೋಧಿ‌ ಸರ್ಕಾರ, ಇದು ಅಲ್ಪಸಂಖ್ಯಾತರ ಕಲ್ಯಾಣ ಮಾತ್ರ ಬಯಸುವ ಸರ್ಕಾರವಾಗಿದೆ. ಅಲ್ಪಸಂಖ್ಯಾತರನ್ನು‌ ಖುಷಿ ಪಡಿಸಲು ಹಿಂದೂಗಳ ಬಂಧನ ಮಾಡಲಾಗಿದೆ ಎಂದಿದ್ದರು.

ಬೆಂಗಳೂರು – ಮಂಗಳೂರು ಬಸ್ಸು ತಡೆದು ಮಾರಕಾಸ್ತ್ರದಿಂದ ಹಲ್ಲೆ- ಪುಡಿ ರೌಡಿಯ ಕಾಲಿಗೆ ಗುಂಡೇಟು, ಅರೆಸ್ಟ್‌

 ಹಾಸನ: ಬೆಂಗಳೂರಿನಿಂದ ಮಂಗಳೂರಿಗೆ  ತೆರಳುತ್ತಿದ್ದ ಖಾಸಗಿ ಬಸ್ ತಡೆದು ಲಾಂಗ್‌ನಿಂದ ಹಲ್ಲೆ ಮಾಡಿ ಅಟ್ಟಹಾಸ ಮೆರೆದಿದ್ದ ಪುಡಿರೌಡಿಯ ಕಾಲಿಗೆ ಪೊಲೀಸರು ಗುಂಡು ಹಾರಿಸಿದ ಘ...