ತಮಿಳು ಚಿತ್ರರಂಗದ ಸೂಪರ್ ಸ್ಟಾರ್, ಡಿಎಂಡಿಕೆ ನಾಯಕ ವಿಜಯಕಾಂತ್ (71) ಅವರು ಗುರುವಾರ ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.ಕೋವಿಡ್ ಸೋಂಕಿಗೆ ತುತ್ತಾಗಿದ್ದ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎನ್ನಲಾಗಿತ್ತು ಆದರೆ ಇಂದು ಬೆಳಿಗ್ಗೆ ನಿಧನ ಹೊಂದಿರುವುದಾಗಿ ಕುಟುಂಬ ಮೂಲಗಳು ಮಾಹಿತಿ ನೀಡಿವೆ.ಆಸ್ಪತ್ರೆಯ ಮೂಲಗಳ ಪ್ರಕಾರ ವಿಜಯಕಾಂತ್ ಅವರು ನ್ಯುಮೋನಿಯಾಕ್ಕೆ ತುತ್ತಾಗಿದ್ದರು ಇದರಿಂದ ಅವರಿಗೆ ವೆಂಟಿಲೇಟರ್ ಮೂಲಕ ಚಿಕಿತ್ಸೆ ನೀಡಲಾಗುತಿತ್ತು. ವೈದ್ಯಕೀಯ ಸಿಬ್ಬಂದಿಯ ಅತ್ಯುತ್ತಮ ಪ್ರಯತ್ನಗಳ ಹೊರತಾಗಿಯೂ ಇಂದು (ಗುರುವಾರ) ಬೆಳಿಗ್ಗೆ ಚಿಕಿತ್ಸೆ ಫಲಿಸದೆ ನಿಧನ ಹೊಂದಿದರು ಎಂದಿದ್ದಾರೆ.ವಿಜಯಕಾಂತ್ ಅವರ ಚಲನಚಿತ್ರ ಪಯಣ ಅದ್ಭುತವಾಗಿತ್ತು ಮತ್ತು ಅವರು ಅನೇಕ ಹಿಟ್ ಚಿತ್ರಗಳನ್ನು ನೀಡಿದ್ದು 154 ಚಿತ್ರಗಳಲ್ಲಿ ನಟಿಸಿದ್ದಾರೆ. ಚಲನಚಿತ್ರಗಳ ನಂತರ ಅವರು ರಾಜಕೀಯಕ್ಕೆ ಸೇರಿದರು, ಅವರು ಡಿಎಂಡಿಕೆ ಸ್ಥಾಪಿಸಿದರು, ಎರಡು ಬಾರಿ ವಿಧಾನಸಭೆಯ ಸದಸ್ಯರಾಗಿ ಸೇವೆ ಸಲ್ಲಿಸಿದರು.ಅವರು 2011 ರಿಂದ 2016 ರವರೆಗೆ ತಮಿಳುನಾಡು ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರಾದಾಗ ಅವರ ರಾಜಕೀಯ ಜೀವನ ಉತ್ತುಂಗದಲ್ಲಿತ್ತು. ಇತ್ತೀಚಿನ ವರ್ಷಗಳಲ್ಲಿ ವಿಜಯಕಾಂತ್ ಅವರ ಆರೋಗ್ಯ ಸ್ಥಿತಿ ಸರಿ ಇರದ ಕಾರಣ ರಾಜಕೀಯದಿಂದ ದೂರ ಉಳಿಯುವಂತೆ ಮಾಡಿತ್ತು.
Friday, 29 December 2023
ತಮಿಳು ನಟ, ಡಿಎಂಡಿಕೆ ನಾಯಕ ವಿಜಯಕಾಂತ್ ವಿಧಿವಶ.

Sunday, 17 December 2023
ಉಡುಪಿಲೀಲಾಧರ ಶೆಟ್ಟಿ ದಂಪತಿ ಆತ್ಮಹತ್ಯೆ: ಸಾಕು ಮಗಳನ್ನು ಕರೆದೊಯ್ದ ಪ್ರೇಮಿ,ನೆರವಾದ ಆರೋಪಿಗಳ ಬಂಧನ.
ಸಾಕು ಮಗಳು ಮನೆಯಿಂದ ನಾಪತ್ತೆಯಾದ ಕಾರಣ ಮನನೊಂದು ನೇಣಿಗೆ ಶರಣಾದ ಸಮಾಜ ಸೇವಕ ಕೆ.ಲೀಲಾಧರ ಶೆಟ್ಟಿ ದಂಪತಿಯ ಸಾವಿಗೆ ಕಾರಣರಾದ ಸಾಕು ಪುತ್ರಿಯನ್ನು ಕಾಪು ಪೊಲೀಸರು ಕುಂಬಳೆಯಲ್ಲಿ ವಶಕ್ಕೆ ಪಡೆದುಕೊಂಡಿದ್ದಾರೆ.ಅಪ್ರಾಪ್ತ ವಯಸ್ಸಿನ ಸಾಕು ಮಗಳು, ಆಕೆಯ ಪ್ರಿಯಕರ ಮತ್ತು ಆತನಿಗೆ ನೆರವಾದ ಇತರ ಮೂವರನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ಮುಂದುವರಿಸಿದ್ದಾರೆ.ಬಾಲಕಿಯ ಪ್ರಿಯಕರ ಶಿರ್ವ ನಿವಾಸಿ ಗಿರೀಶ್, ಆತನಿಗೆ ನೆರವಾದ ರೂಪೇಶ್, ಅಜೀಜ್ ಮತ್ತು ಜಯಂತ್ ಪೊಲೀಸ್ ಬಂಧಿತರು. ಬಂಧಿತರನ್ನು ತೀವ್ರ ವಿಚಾರಣೆಗೊಳಪಡಿಸಿರುವ ಪೊಲೀಸರು ಎರಡು ಸ್ಕೂಟಿಗಳನ್ನು ವಶಪಡಿಸಿಕೊಂಡಿದ್ದಾರೆ.
Saturday, 16 December 2023
KSRTC ಟ್ರೇಡ್‌ಮಾರ್ಕ್ ವಿವಾದ; ಇನ್ಮೇಲೆ KSRTC ಹೆಸರು ಕೇರಳ ಬಳಸುವಂತಿಲ್ಲ..! ಕರ್ನಾಟಕಕ್ಕೆ ಜಯ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ಸುಗಳಿಗೆ KSRTC ಹೆಸರು ಬಳಕೆ ಮಾಡುತ್ತಿರುವುದನ್ನು ಪ್ರಶ್ನಿಸಿ ಕೇರಳ RTC ಸಲ್ಲಿಸಿದ್ದ ಅರ್ಜಿಯನ್ನು ಮದ್ರಾಸ್ ಹೈಕೋರ್ಟ್ ವಜಾಗೊಳಿಸಿದ್ದು, ಹೆಸರು ಬಳಕೆಗೆ ಯಾವುದೇ ಅಭ್ಯಂತರವಿಲ್ಲ ಎಂದು ನ್ಯಾಯಾಲಯ ಹೇಳಿದೆ. ಕರ್ನಾಟಕ ಕೆಣಕಿ ಕೇರಳ ಸೋತಿದ್ದು, KSRTC ಇನ್ಮುಂದೆ ನಮ್ದೇ. KSRTC ಹೆಸರು ಕೇರಳ ಇನ್ಮೇಲೆ ಬಳಸುವಂತಿಲ್ಲ. ಕರ್ನಾಟಕ KSRTC ಟ್ರೇಡ್ ಮಾರ್ಕ್ ಉಳಿಸಿಕೊಂಡಿದೆ.KSRTC ಟ್ರೇಡ್ ಮಾರ್ಕ್ ಬಳಕೆ ಬಗ್ಗೆ ಸಮರ ನಡೆದಿದ್ದು, ಕರ್ನಾಟಕ ಹಾಗೂ ಕೇರಳ ಸಾರಿಗೆ ಸಂಸ್ಥೆಗಳ ನಡುವೆ ಫೈಟ್ ನಡೆದಿತ್ತು. ಕೇರಳ KSRTC ಹೆಸರು ನಮ್ಮದೆಂದು ಕೋರ್ಟ್ ಮೊರೆ ಹೋಗಿತ್ತು. ಮದ್ರಾಸ್ ಹೈಕೋರ್ಟ್‌ನ ಬೌದ್ಧಿಕ ಆಸ್ತಿ ಮೇಲ್ಮನವಿ ಮಂಡಳಿ ಆದೇಶ ನೀಡಿದೆ. ಎರಡೂ ರಾಜ್ಯಗಳ ಸಾರಿಗೆ ಸಂಸ್ಥೆ ಹೆಸರು ಇಂಗ್ಲಿಷ್ನಲ್ಲಿ ಒಂದೇ ಇತ್ತು. 2021ರಲ್ಲಿ ಟ್ರೆಂಡ್ ಮಾರ್ಕ್ ರಿಜಿಸ್ಟ್ರಾರ್ ಕರ್ನಾಟಕ KSRTC ಬಳಸುವಂತಿಲ್ಲ ಎಂದಿತ್ತು. ಕರ್ನಾಟಕ ಈ ಆದೇಶ ಪ್ರಶ್ನೆ ಮಾಡಿ ಕೋರ್ಟ್ ಮೊರೆ ಹೋಗಿತ್ತು.
ಕಳೆದ 27 ವರ್ಷಗಳಿಂದಲೂ KSRTC ಟ್ರೇಡ್ ಮಾರ್ಕ್ ಸಮರ ನಡೆದಿತ್ತು. ಕೇರಳ-ಕರ್ನಾಟಕ ಸಾರಿಗೆ ಸಂಸ್ಥೆಗಳ ನಡುವೆ ಫೈಟ್ ನಡೆದಿತ್ತು. ಕೇಂದ್ರದ ಟ್ರೇಡ್ ಮಾರ್ಕ್ ರಿಜಿಸ್ಟ್ರಿ 2013ರಲ್ಲಿ ಪ್ರಮಾಣ ಪತ್ರ ಪರಿಶೀಲಿಸಿತ್ತು.1973ರಿಂದ ಟ್ರೇಡ್ ಮಾರ್ಕ್ ಬಳಕೆ ಮಾಡ್ತಿರೋದನ್ನು ಪರಿಶೀಲಿಸಿತ್ತು. KSRTC ಲೋಗೋ ಮತ್ತು ‘ಗಂಡಭೇರುಂಡ ಗುರುತು’ ಬಳಕೆಗೆ ಕಾಪಿ ರೈಟ್ ನಡೆದಿದೆ. ಕೇರಳ ಚೆನ್ನೈನ ಬೌದ್ಧಿಕ ಆಸ್ತಿ ಮೇಲ್ಮನವಿ ಮಂಡಳಿಗೆ ಹೋಗಿತ್ತು. ಕರ್ನಾಟಕ 42 ವರ್ಷದಿಂದ KSRTC ಬಳಸ್ತಿರೋದು ಕೇರಳಕ್ಕೆ ಗೊತ್ತು. KSRTC ಪಡೆದಿರುವ ಟ್ರೇಡ್ ಮಾರ್ಕ್ ನೋಂದಣಿ ಅಮಾನ್ಯವಲ್ಲ, ಈ ಬಗ್ಗೆ ಅರ್ಜಿ ಸಲ್ಲಿಸಲು ಕೇರಳ ಅರ್ಹರಾಗಿರುವುದಿಲ್ಲ ಎಂದು KSRTC ವಾದವಾಗಿದೆ. ಕೇರಳ KSRTC ಕೂಡ 2019ರಲ್ಲಿ KSRTC ಸಂಕ್ಷಿಪ್ತ ಹೆಸರು ಬಳಕೆ ನೋಂದಣಿ ಪಡೆದಿತ್ತು. ಕೇಂದ್ರ ಸರ್ಕಾರವು ಆನಂತರ ಐಪಿಎಬಿಯನ್ನು ರದ್ದುಗೊಳಿಸಿತ್ತು. ಐಪಿಎಬಿ ಮುಂದಿದ್ದ ಪ್ರಕರಣ ಮದ್ರಾಸ್ ಹೈಕೋರ್ಟ್‌ಗೆ ವರ್ಗಾಯಿಸಲಾಗಿತ್ತು.
ನಾಯಿ ಕಚ್ಚಿದನ್ನು ಪ್ರಶ್ನಿಸಿದಾತನ ಮೇಲೆ ನಾಯಿ ಮಾಲಕನಿಂದ ಚೂರಿಯಿರಿತ
ಪಾದಾಚಾರಿಯೊಬ್ಬರಿಗೆ ದಾರಿ ಮಧ್ಯೆ ನಾಯಿಯೊಂದು ಕಚ್ಚಿದ್ದು, ಇದನ್ನು ಪ್ರಶ್ನಿಸಿದ್ದಕ್ಕೆ ನಾಯಿಯ ಯಜಮಾನ ಕತ್ತಿಯಿಂದ ಕಡಿದು ಹಲ್ಲೆ ಮಾಡಿದ ಘಟನೆಯೊಂದು ಡಿ.13 ರಂದು ನಡೆದಿದೆ. ಈ ಘಟನೆ ಬಂಟ್ವಾಳ, ಕಾವಳ ಮುಡೂರು ಗ್ರಾಮದಲ್ಲಿ ನಡೆದಿದೆ.ಸಂತೋಷ್ ದೇವಾಡಿಗ ಹಲ್ಲೆಗೊಳಗಾದ ವ್ಯಕ್ತಿ. ಶ್ರೀಧರ ಶೆಟ್ಟಿ ಹಲ್ಲೆ ಆರೋಪಿ.
ಡಿ.13 ರಂದು ಕಾವಳಕಟ್ಟೆಯಿಂದ ನೆಲ್ಲಿಗುಡ್ಡೆ ಕಡೆಗೆ ಹೋಗುವ ಸಾರ್ವಜನಿಕ ರಸ್ತೆಯಲ್ಲಿ ಸಂತೋಷ್ ದೇವಾಡಿಗ ಅವರು ನಡೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ, ಬಾರದಬೈಲು ಎಂಬಲ್ಲಿಗೆ ತಲುಪಿದಾಗ ಪಕ್ಕದ ಮನೆಯ ನಾಯಿಯೊಂದು ಬಲಗಾಲಿಗೆ ಕಚ್ಚಿದೆ. ಈ ಸಮಯದಲ್ಲಿ ಆರೋಪಿ ಶ್ರೀಧರ ಶೆಟ್ಟಿಯವರು ಮನೆಯಂಗಳದಲ್ಲಿ ನಿಂತಿದ್ದು, ಯಾಕೆ ಕಚ್ಚುವ ನಾಯಿಯನ್ನು ರಸ್ತೆಗೆ ಬಿಡುತ್ತೀರಿ ಎಂದು ಪ್ರಶ್ನೆ ಮಾಡಿದಾಗ, ಶ್ರೀಧರ್ ಅವರು ಅವಾಚ್ಯ ಶಬ್ದಗಳಿಂದ ಬೈದು ಕಡಿದು ಗಾಯಗೊಳಿಸಿದ್ದಾಗಿ ಪೂಂಜಾಲಕಟ್ಟೆ ಠಾಣೆಗೆ ನೀಡಿದ ದೂರಿನಲ್ಲಿ ಸಂತೋಷ್ ಅವರು ಆರೋಪ ಮಾಡಿದ್ದಾರೆ.
ಉಡುಪಿ ಜಿಲ್ಲೆಯಲ್ಲಿ ನಕಲಿ ವೈದ್ಯರ ಕ್ಲಿನಿಕ್ ಮೇಲೆ ಆರೋಗ್ಯ ಇಲಾಖೆಯ ಅಧಿಕಾರಿಗಳ ದಾಳಿ
ಉಡುಪಿ, ಡಿಸೆಂಬರ್ 16 :
ಜಿಲ್ಲೆಯಲ್ಲಿ ನಕಲಿ ವೈದ್ಯರ ಹಾವಳಿಯನ್ನು ತಡೆಯುವ ಉದ್ದೇಶದೊಂದಿಗೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ವಿವಿಧೆಡೆ ಧಿಡೀರ್ ದಾಳಿ ಹಾಗೂ ತಪಾಸಣೆ ಕೈಗೊಂಡು ಕ್ಲಿನಿಕ್ ಹಾಗೂ ಲ್ಯಾಬ್‌ಗಳ ನ್ಯೂನ್ಯತೆ ಕಂಡು ಬಂದ ಹಿನ್ನೆಲೆ, ನಕಲಿ ವೈದ್ಯ ತಡೆ ಹಾಗೂ ಕೆ.ಪಿ.ಎಂ.ಇ ಕಾಯ್ದೆಯಡಿ ಪ್ರಕರಣ ದಾಖಲಿಸಿ, ಲ್ಯಾಬ್ ಹಾಗೂ ಕ್ಲಿನಿಕ್‌ಗಳನ್ನು ಸೀಜ್ ಮಾಡಲಾಗಿದೆ.
ಉಡುಪಿ ತಾಲೂಕು ಪ್ರಾಧಿಕಾರ ಹಾಗೂ ಆರೋಗ್ಯ ಅಧಿಕಾರಿಗಳ ನೇತೃತ್ವದ ತಂಡವು ಆದಿ ಉಡುಪಿಯ ಧನ್ವಂತರಿ ಕ್ಲಿನಿಕ್‌ನಲ್ಲಿ ಡಾ. ಎ.ಆರ್ ಆಚಾರ್ಯ ರವರು ಆಯುರ್ವೇದ ಕ್ಲಿನಿಕ್‌ನ ನೋಂದಣಿ ಹೊಂದಿ ಅಲೋಪತಿಕ್ ಪದ್ಧತಿಯ ಚಿಕಿತ್ಸೆ ನೀಡುತ್ತಿದ್ದ ಹಿನ್ನೆಲೆ ಪ್ರಕರಣ ದಾಖಲಾಗಿದೆ. ಕುಂದಾಪುರ ತಾಲೂಕು ಪ್ರಾಧಿಕಾರ ಮತ್ತು ಆರೋಗ್ಯ ಅಧಿಕಾರಿಗಳ ತಂಡವು ನಾವುಂದದ ನಂಬಿಯಾರ್ ಕ್ಲಿನಿಕ್ ನಲ್ಲಿ ಡಾ. ಪ್ರಜೀತ್ ಎಸ್ ನಂಬಿಯಾರ್ ಅವರು, ಆಯುರ್ವೇದಿಕ್ ಪದ್ಧತಿಯಲ್ಲಿ ನೋಂದಾವಣೆ ಹೊಂದಿ ಅಲೋಪತಿಕ್ ಪದ್ಧತಿಯಲ್ಲಿ ಚಿಕಿತ್ಸೆ ನೀಡುತ್ತಿರುವುದು ಕಂಡುಬಂದಿರುವ ಹಿನ್ನೆಲೆ, ಪ್ರಕರಣ ದಾಖಲಿಸಲಾಗಿದೆ.
ಕುಂದಾಪುರ ತಾಲೂಕು ಪ್ರಾಧಿಕಾರ ಹಾಗೂ ಆರೋಗ್ಯ ಅಧಿಕಾರಿಗಳ ತಂಡವು ಉಪ್ಪುಂದದ ಸುಷ್ಮಾ ಕ್ಲಿನಿಕಲ್ ಲ್ಯಾಬ್ ಅನ್ನು ಲತಾ ಸುನೀಲ್ ಕೆ ಅವರು ಪರವಾನಿಗೆ ಇಲ್ಲದೇ ನಡೆಸುತ್ತಿರುವುದು ಕಂಡು ಬಂದ ಹಿನ್ನೆಲೆ, ಲ್ಯಾಬ್ ಅನ್ನು ಸೀಝ್ ಮಾಡಿ, ಪ್ರಕರಣ ದಾಖಲಿಸಲಾಗಿದೆ. ಕುಂದಾಪುರ ತಾಲೂಕು ಪ್ರಾಧಿಕೃತ ಹಾಗೂ ಆರೋಗ್ಯ ಅಧಿಕಾರಿಗಳ ತಂಡವು ಕುಂದಾಪುರದ ಬಯೋಲಿನ್ ಲ್ಯಾಬ್ ನಲ್ಲಿ ರಾಜ್ಯದ ನೋಂದಾವಣೆ ಪ್ರಮಾಣ ಪತ್ರವನ್ನು ಹೊಂದಿರದವರು ಲ್ಯಾಬ್ ಟೆಕ್ನಿಷಿಯನ್ ಆಗಿ ಕಾರ್ಯನಿರ್ವಹಣೆ ಮಾಡುತ್ತಿರುವುದು ಕಂಡುಬಂದಿರುವ ಹಿನ್ನೆಲೆ, ಎಫ್.ಐ.ಆರ್ ದಾಖಲಿಸಲಾಗಿದೆ. ಸಾರ್ವಜನಿಕರು ಜಾಗೃತೆ ವಹಿಸಿ ಕೆ.ಪಿ.ಎಂ.ಇ ಕಾಯ್ದೆ ಅಡಿಯಲ್ಲಿ ನೊಂದಾವಣೆಯಾಗಿರದ ಅಥವಾ ನಕಲಿ ವೈದ್ಯರುಗಳಲ್ಲಿ ಚಿಕಿತ್ಸೆ ಪಡೆದುಕೊಳ್ಳಬಾರದು. ನಕಲಿ ವೈದ್ಯರ ಬಗ್ಗೆ ಮಾಹಿತಿ ಇದ್ದಲ್ಲಿ ಕುಂದಾಪುರ ಮೊ.ನಂ. 8277505911, ಕಾರ್ಕಳ ಮೊ.ನಂ. 8277505892 ಅಥವಾ ಉಡುಪಿಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಚೇರಿ ದೂ.ಸಂಖ್ಯೆ: 0820-2525566, 2536650 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.
Friday, 15 December 2023
ನಾಯಿ ಕಚ್ಚಿದನ್ನು ಪ್ರಶ್ನಿಸಿದಾತನ ಮೇಲೆ ನಾಯಿ ಮಾಲಕನಿಂದ ಚೂರಿಯಿರಿತ
ಪಾದಾಚಾರಿಯೊಬ್ಬರಿಗೆ ದಾರಿ ಮಧ್ಯೆ ನಾಯಿಯೊಂದು ಕಚ್ಚಿದ್ದು, ಇದನ್ನು ಪ್ರಶ್ನಿಸಿದ್ದಕ್ಕೆ ನಾಯಿಯ ಯಜಮಾನ ಕತ್ತಿಯಿಂದ ಕಡಿದು ಹಲ್ಲೆ ಮಾಡಿದ ಘಟನೆಯೊಂದು ಡಿ.13 ರಂದು ನಡೆದಿದೆ. ಈ ಘಟನೆ ಬಂಟ್ವಾಳ, ಕಾವಳ ಮುಡೂರು ಗ್ರಾಮದಲ್ಲಿ ನಡೆದಿದೆ.ಸಂತೋಷ್ ದೇವಾಡಿಗ ಹಲ್ಲೆಗೊಳಗಾದ ವ್ಯಕ್ತಿ. ಶ್ರೀಧರ ಶೆಟ್ಟಿ ಹಲ್ಲೆ ಆರೋಪಿ.
ಡಿ.13 ರಂದು ಕಾವಳಕಟ್ಟೆಯಿಂದ ನೆಲ್ಲಿಗುಡ್ಡೆ ಕಡೆಗೆ ಹೋಗುವ ಸಾರ್ವಜನಿಕ ರಸ್ತೆಯಲ್ಲಿ ಸಂತೋಷ್ ದೇವಾಡಿಗ ಅವರು ನಡೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ, ಬಾರದಬೈಲು ಎಂಬಲ್ಲಿಗೆ ತಲುಪಿದಾಗ ಪಕ್ಕದ ಮನೆಯ ನಾಯಿಯೊಂದು ಬಲಗಾಲಿಗೆ ಕಚ್ಚಿದೆ. ಈ ಸಮಯದಲ್ಲಿ ಆರೋಪಿ ಶ್ರೀಧರ ಶೆಟ್ಟಿಯವರು ಮನೆಯಂಗಳದಲ್ಲಿ ನಿಂತಿದ್ದು, ಯಾಕೆ ಕಚ್ಚುವ ನಾಯಿಯನ್ನು ರಸ್ತೆಗೆ ಬಿಡುತ್ತೀರಿ ಎಂದು ಪ್ರಶ್ನೆ ಮಾಡಿದಾಗ, ಶ್ರೀಧರ್ ಅವರು ಅವಾಚ್ಯ ಶಬ್ದಗಳಿಂದ ಬೈದು ಕಡಿದು ಗಾಯಗೊಳಿಸಿದ್ದಾಗಿ ಪೂಂಜಾಲಕಟ್ಟೆ ಠಾಣೆಗೆ ನೀಡಿದ ದೂರಿನಲ್ಲಿ ಸಂತೋಷ್ ಅವರು ಆರೋಪ ಮಾಡಿದ್ದಾರೆ.
Wednesday, 13 December 2023
ಲೋಕಸಭೆಯಲ್ಲಿ ಭಾರೀ ಭದ್ರತಾ ಲೋಪ, ಎದ್ನೋ-ಬಿದ್ನೋ ಅಂತ ಓಡಿದ ಸಂಸದರು!
ಲೋಕಸಭೆಯಲ್ಲಿ (Loksabha) ಭಾರೀ ಭದ್ರತಾ ಲೋಪವಾಗಿದೆ. ಹಿಂದೆಂದೂ ನಡೆದಿರದಂಥ ಒಂದು ಘಟನೆ ನಡೆದಿದೆ. ಲೋಕಸಭೆಯಲ್ಲಿದ್ದ ಸಚಿವರು ಜೀವ ಉಳಿಸಿಕೊಳ್ಳಲು ದಿಕ್ಕಾಪಾಲಾಗಿ ಓಡಿದ್ದಾರೆ.
ನೀಲಿ ಬಣ್ಣದ ಜಾಕೆಟ್ ಧರಿಸಿದ ಯುವಕನೊಬ್ಬ ಸಂದರ್ಶಕರ ಗ್ಯಾಲರಿಯಿಂದ ಜಿಗಿದು ಸದನದ ಸುತ್ತಲೂ ಓಡಲು ಪ್ರಾರಂಭಿಸಿದ್ದಾನೆ. ಬಳಿಕ ಆತನ ಜೊತೆ ಮತ್ತೊಬ್ಬ ಸೇರಿಕೊಂಡಿದ್ದು ಇಬ್ಬರೂ ಟಿಯರ್ ಗ್ಯಾಸ್ (Tear Gas) ಎಸೆದು ಆತಂಕ ಸೃಷ್ಟಿಸಿದ್ದಾರೆ. ಈ ಘಟನೆ ನಡೆಯುತ್ತಿದ್ದಂತೆ ಅಲ್ಲಿ ನೆರೆದಿದ್ದ ಸಂಸದರು ದಿಕ್ಕಾಪಾಲಾಗಿ ಓಡಿ ಹೊರಬಂದಿದ್ದಾರೆ.
ಬಳಿಕ ಆತನ ಜೊತೆ ಮತ್ತೊಬ್ಬ ಸೇರಿಕೊಂಡಿದ್ದು ಇಬ್ಬರೂ ಟಿಯರ್ ಗ್ಯಾಸ್ (Tear Gas) ಎಸೆದು ಆತಂಕ ಸೃಷ್ಟಿಸಿದ್ದಾರೆ. ಈ ಘಟನೆ ನಡೆಯುತ್ತಿದ್ದಂತೆ ಅಲ್ಲಿ ನೆರೆದಿದ್ದ ಸಂಸದರು ದಿಕ್ಕಾಪಾಲಾಗಿ ಓಡಿ ಹೊರಬಂದಿದ್ದಾರೆ. 22 ವರ್ಷಗಳ ಹಿಂದೆ ಇದೇ ರೀತಿಯ ಘಟನೆ ನಡೆದಿತ್ತಂತೆ.
ವೀಕ್ಷಕರ ಗ್ಯಾಲರಿಯಲ್ಲಿ ಕುಳಿತಿದ್ದ ಸಾಗರ್ ಎಂಬ ವ್ಯಕ್ತಿಯೊಬ್ಬ ಇದ್ದಕ್ಕಿದ್ದ ಹಾಗೇ ಸದನದ ಬಾವಿಗೆ ಹಾರಿದ್ದಾನೆ. ಇವರನ್ನು ಕಂಡ ಸಂಸದರು ಹೆದರಿ ಹೊರಗೆ ಓಡಿ ಬಂದಿದ್ದಾರೆ.
ಬೆಂಗಳೂರು – ಮಂಗಳೂರು ಬಸ್ಸು ತಡೆದು ಮಾರಕಾಸ್ತ್ರದಿಂದ ಹಲ್ಲೆ- ಪುಡಿ ರೌಡಿಯ ಕಾಲಿಗೆ ಗುಂಡೇಟು, ಅರೆಸ್ಟ್
ಹಾಸನ: ಬೆಂಗಳೂರಿನಿಂದ ಮಂಗಳೂರಿಗೆ ತೆರಳುತ್ತಿದ್ದ ಖಾಸಗಿ ಬಸ್ ತಡೆದು ಲಾಂಗ್‌ನಿಂದ ಹಲ್ಲೆ ಮಾಡಿ ಅಟ್ಟಹಾಸ ಮೆರೆದಿದ್ದ ಪುಡಿರೌಡಿಯ ಕಾಲಿಗೆ ಪೊಲೀಸರು ಗುಂಡು ಹಾರಿಸಿದ ಘ...
-
ಹಾಸನ: ಬೆಂಗಳೂರಿನಿಂದ ಮಂಗಳೂರಿಗೆ ತೆರಳುತ್ತಿದ್ದ ಖಾಸಗಿ ಬಸ್ ತಡೆದು ಲಾಂಗ್‌ನಿಂದ ಹಲ್ಲೆ ಮಾಡಿ ಅಟ್ಟಹಾಸ ಮೆರೆದಿದ್ದ ಪುಡಿರೌಡಿಯ ಕಾಲಿಗೆ ಪೊಲೀಸರು ಗುಂಡು ಹಾರಿಸಿದ ಘ...
-
ಕೇರಳಕ್ಕೆ ಭೇಟಿ ಕೊಟ್ಟ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಜನವರಿ 22ರಂದು ಅಯೋಧ್ಯೆಯಲ್ಲಿ ಅದ್ದೂರಿಯಾಗಿ ನಡೆಯಲಿರುವ ರಾಮಮಂದಿರದ ಶಂಕುಸ್ಥಾಪನೆ ಸಮಾರಂಭವನ್ನು ರಾಜ್ಯದ...
-
ಪುತ್ತೂರು ಸೆಪ್ಟೆಂಬರ್ 24: ಅಂಬ್ಯುಲೆನ್ಸ್ ಗೆ ಪಿಕಪ್ ವೊಂದು ಡಿಕ್ಕಿ ಹೊಡೆದ ಘಟನೆ ಘಟನೆ ಪುತ್ತೂರು ತಾಲೂಕಿನ ಮುರ ಎಂಬಲ್ಲಿ ಸೋಮವಾರ ತಡರಾತ್ರಿ ನಡೆದಿರುವ ಬಗ್ಗೆ ವರದ...